ಕಲಬುರಗಿ: ಪಟಾಕಿಗಳಲ್ಲಿ ಇಸ್ಲಾಂ ಧರ್ಮ ಗ್ರಂಥ ಕುರ್ಆನ್ ಪುಸ್ತಕದ ಹಾಳೆಗಳ ಚೂರುಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಬ್ರಹ್ಮಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಮೋಮಿನಪುರ ನಿವಾಸಿ ಆಟೊ ಚಾಲಕ ಮಹಮದ್ ಖಮಾರ್ ಹನೀಫ್ ಹಾಗೂ ಇತರರು ದೂರು ದಾಖಲಿಸಿದ್ದಾರೆ.

ನಗರದ ಬಟ್ಟೆ ಅಂಗಡಿಯೊಂದರ ಮಾಲೀಕರು ದೀಪಾವಳಿ ಪೂಜೆಯ ಬಳಿಕ ಅಂಗಡಿ ಮುಂದೆ ಪಟಾಕಿ ಸಿಡಿಸಿದ್ದರು. ಸಿಡಿದ ಪಟಾಕಿಯ ತುಣುಕುಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಮಹಮದ್ ಖಮಾರ್ ಅವರು ಪಟಾಕಿಯ ತುಣುಕುಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಇಸ್ಲಾಂ ಧರ್ಮ ಗ್ರಂಥ ಕುರ್ಆನ್ ಪುಸ್ತಕದ ಹಾಳೆಗಳ ಚೂರುಗಳನ್ನು ಪಟಾಕಿಯಲ್ಲಿ ಸೇರಿಸಲಾಗಿತ್ತು. ಚೂರುಗಳಲ್ಲಿ ಕುರ್ಆನ್ ಆಯಾತುಗಳು ಬರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಖಮಾರ್ ಅವರು ತಕ್ಷಣವೇ ತಮ್ಮ ಸಮುದಾಯದ ಮುಖಂಡರಿಗೆ ಫೋನ್ ಕರೆ ಮಾಡಿದರು. ಮುಖಂಡರಾದ ಅಷ್ಪಾ ಅಹಮದ್, ವಸೀಮ್ ಶೇಖ್, ವಾಜೀದ್ ಶೇಖ್ ಮತ್ತು ಶೇಖ್ ಸೈಫಾನ್ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಪಟಾಕಿಯಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಕಾಗದದ ಚೂರುಗಳನ್ನು ಬಳಸಲಾಗಿದೆ. ಇದರಿಂದ ನಮ್ಮ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ತೀವ್ರ ನೋವು ತರಿಸಿದೆ. ಧರ್ಮದ ಪುಸ್ತಕವನ್ನು ಹರಿದು, ಅದರ ಹಾಳೆಗಳನ್ನು ಪಟಾಕಿಗಳಲ್ಲಿ ಬಳಸಿದ ಪಟಾಕಿ ತಯಾರಿಕಾ ಕಂಪನಿ ಹಾಗೂ ಮಾರಾಟಗಾರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ದೂರಿನ ಅನ್ವಯ ಬ್ರಹ್ಮಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295, 295(ಎ) ಅಡಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.