ಕಲಬುರ್ಗಿ: ‘ಕೇವಲ ಮೂರು ದಶಕಗಳ ಹಿಂದೆ ನಾವು ಕುಡಿಯುವ ನೀರು ಖರೀದಿಸುತ್ತಿರಲಿಲ್ಲ. ದುಡ್ಡು ಕೊಟ್ಟು ನೀರು ಪಡೆಯಬೇಕಾದ ಸ್ಥಿತಿ ಬರುತ್ತದೆ ಎಂದು ಆಗ ಯಾರಿಗೂ ಅನ್ನಿಸಿರಲಿಲ್ಲ. ಈಗ ನಾವು ಆಮ್ಲಜನಕ ಖರೀದಿ ಮಾಡುತ್ತಿಲ್ಲ. ಮುಂದೊಂದು ದಿನ ನೀರಿನಂತೆಯೇ ಆಮ್ಲಜನಕವನ್ನೂ ಖರೀದಿ ಮಾಡಬೇಕಾದ ಅನಿವಾರ್ಯ ಬರಬಹುದು’ ಎಂದು ಪಾಲಿಕೆ ಪರಿಸರ ಎಂಜಿನಿಯರ್ ಮುನಾಫ್ ಪಟೇಲ್ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ದೊಡ್ಡಪ್ಪ ಅಪ್ಪ ವಸತಿ ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

‘ಅರಣ್ಯ ಸಂರಕ್ಷಿಸಿದರೆ ಮಳೆ ಹೆಚ್ಚಾಗುತ್ತದೆ. ಚಿರಾಪುಂಜಿ, ಪಶ್ಚಿಮ ಘಟ್ಟಗಳಲ್ಲಿ ಮಳೆ ಹೆಚ್ಚು ಬೀಳುತ್ತದೆ. ಇದಕ್ಕೆ ಕಾರಣ ಅಲ್ಲಿ ದಟ್ಟವಾದ ಕಾಡಿರುವುದು. ಭಾರತಕ್ಕೆ 130 ಕೋಟಿ ಜನರಿಗೆ ಆಹಾರ, ನೀರು, ನೆರಳು ಪೂರೈಸುವ ತಾಕತ್ತಿದೆ. ಜನಸಂಖ್ಯೆ ಹೆಚ್ಚಾದರೆ ಪೂರೈಕೆ ಕಷ್ಟವಾಗುತ್ತದೆ. ನಾವು ಎಲ್ಲವನ್ನೂ ಸುಲಭವಾಗಿ ಪಡೆಯುವ ಭರದಲ್ಲಿ ಪರಿಸರ ಹಾಳು ಮಾಡುವ ಮಾರ್ಗ ಹಿಡಿಯುತ್ತಿದ್ದೇವೆ’ ಎಂದರು.

‘ಸಾವಯವ ಕೃಷಿ ಮಾಡುವ ಮೂಲಕ ಭೂ ಮಾಲಿನ್ಯ ಮತ್ತು ವಾತಾವರಣ ಮಾಲಿನ್ಯವನ್ನು ತಡೆಗಟ್ಟಬಹುದು. ಆರೋಗ್ಯಕ್ಕೆ ಪೂರಕವಾದ ವಿಷಕಾರಿಯಲ್ಲದ ಆಹಾರವನ್ನು ಉತ್ಪಾದಿಸುವುದು ನಮ್ಮ ದೇಶದ ರೈತನ ಆದ್ಯ ಕರ್ತವ್ಯ. ಕೃಷಿ ಸಂಸ್ಕೃತಿ ನಮ್ಮ ಪುರಾತನ ಸಂಸ್ಕೃತಿ. ನೈಸರ್ಗಿಕ ಕೃಷಿಯಿಂದ ಉತ್ತಮ ಆಹಾರ ಧಾನ್ಯಗಳನ್ನು ಉತ್ಪಾದಿಸಿ ಮಾನವನ ಆರೋಗ್ಯ ಹೆಚ್ಚಿಸಬೇಕಾಗಿದೆ’ ಎಂದರು.

ಸುಕ್ರುತಾ ಜೋಶಿ ಪ್ರಾರ್ಥನೆ ಹಾಡಿದರು. ಸುಪ್ರಿಯಾ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು. ಸಂಪ್ರೀತ್ ವಂದಿಸಿದರು. ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯರು ಹಾಗೂ ಸಿಬ್ಬಂದಿ ಇದ್ದರು.

ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆ:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶರಣಬಸವೇಶ್ವರ ವಸತಿ ಪಬ್ಲಿಕ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಚಿತ್ರಕಲೆ ಮತ್ತು ಆಶುಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಡಾ ಮಾರ್ಟಿನ್ ಮಾರ್ಬನ್ಯಾಂಗ್, ಪತ್ರಕರ್ತ ವಿಜಯ ರಾಮರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪನ್ಯಾಸಕ ಶ್ರೀಶೈಲ ಹೊಗಾಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯರಾದ ಶಂಕರಗೌಡ ಹೊಸಮನಿ, ಎನ್.ಎಸ್. ದೇವರಕಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.