ಮಡಿಕೇರಿ: ಚಿನ್ನದ ಸರ ಕಳವು ಮಾಡಿದ್ದ ಆರೋಪಿಯನ್ನು ಇಲ್ಲಿನ ನಗರ ಠಾಣೆಯ ಪೊಲೀಸರು ಕೇವಲ 2 ಗಂಟೆಯೊಳಗೆ ಬಂಧಿಸಿ, ಕಳವಾಗಿದ್ದ 15 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೊವನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ದೇಚೂರು ನಿವಾಸಿಯಾದ ಶಿವಕುಮಾರ್ ಎಂಬುವವರು ಭಾನುವಾರ ಆಟೊದಲ್ಲಿ ತೆರಳುವಾಗ ಹಳೆ ಖಾಸಗಿ ಬಸ್ನಿಲ್ದಾಣದ ಬಳಿ ಕೆಳಗಿಳಿಸಿ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಚಾಲಕ ಅಬ್ದುಲ್ ರಜಾಕ್ (35) ಪರಾರಿಯಾಗಿದ್ದ.

ಘಟನೆ ನಡೆದ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಿಪಿಐ ಅನೂಪ್ ಮಾದಪ್ಪ, ಪಿಎಸ್ಐಗಳಾದ ಲೋಕೇಶ್, ರಾಧಾ ಹಾಗೂ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.

ಆಟೊ ಅಥವಾ ಟ್ಯಾಕ್ಸಿಯಲ್ಲಿ ಸಂಚರಿಸುವಾಗ ಯಾವುದಾದರೂ ಅನುಚಿತ ವರ್ತನೆಗಳು ಅನುಭವಕ್ಕೆ ಬಂದರೆ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.