ಮಡಿಕೇರಿ: ಹೈದರಾಬಾದ್ ನಿವಾಸಿ ರಮೇಶ್ಕುಮಾರ್ (54) ಎಂಬವರನ್ನು ತೆಲಂಗಾಣದಲ್ಲಿ ಕೊಂದು, ಶವವನ್ನು ಕೊಡಗು ಜಿಲ್ಲೆಯ ಸುಂಟಿಕೊಪ್ಪಕ್ಕೆ ತಂದು ಸುಟ್ಟು ಹಾಕಿದ ಪ್ರಕರಣದ ಪ್ರಮುಖ ಆರೋಪಿ ಹರಿಯಾಣದ ಅಂಕೂರ್ ರಾಣಾ (30) ಎಂಬಾತ ತೆಲಂಗಾಣದ ಉಪ್ಪುಳ್ ಎಂಬಲ್ಲಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.

‘ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಐವರು ಪೊಲೀಸರು ಟೆಂಪೊ ಟ್ರಾವೆಲರ್ನಲ್ಲಿ ಆರೋಪಿಯನ್ನು ತೆಲಂಗಾಣದ ಉಪ್ಪುಳ್ಗೆ ಕರೆದುಕೊಂಡು ಹೋಗಿದ್ದರು. ದೀರ್ಘ ಪ್ರಯಾಣದ ಬಳಲಿಕೆಯಿಂದ ಎಲ್ಲ ಪೊಲೀಸರು ಲಾಡ್ಜ್ವೊಂದರಲ್ಲಿ ನಿದ್ದೆಗೆ ಜಾರಿದ್ದರು. ಈ ವೇಳೆ ಆರೋಪಿಯು ಪೊಲೀಸ್ ಸಿಬ್ಬಂದಿಯೊಬ್ಬರ ಮೊಬೈಲ್ ಫೋನ್ ತೆಗೆದುಕೊಂಡು ಅ.31ರಂದು ರಾತ್ರಿ ಪರಾರಿಯಾಗಿದ್ದಾನೆ. ಈತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮಹತ್ವದ ಸುಳಿವು ಲಭ್ಯವಾಗಿದ್ದು, ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ‘ಪ್ರಜಾವಾಣಿ’ಗೆ ತಿಳಿಸಿದರು.

ತೆಲಂಗಾಣದ ಮಹಿಳೆ ನಿಹಾರಿಕಾ (29) ಎಂಬಾಕೆ ತನ್ನ ಗೆಳೆಯರಾದ ಬೆಂಗಳೂರಿನ ಪಶುವೈದ್ಯ ನಿಖಿಲ್ ಮೈರೆಡ್ಡಿ (28) ಹಾಗೂ ಹರಿಯಾಣದ ಅಂಕೂರ್ ರಾಣಾ (30) ಎಂಬುವವರೊಂದಿಗೆ ಸೇರಿಕೊಂಡು ತನ್ನ 3ನೇ ಪತಿ ತೆಲಂಗಾಣದ ರಮೇಶ್ ಕುಮಾರ್ ಎಂಬಾತನನ್ನು ಕೊಂದು, ಶವವನ್ನು ಸುಂಟಿಕೊಪ್ಪದ ಸಮೀಪ ಎಸ್ಟೇಟ್ವೊಂದರಲ್ಲಿಅ. 8ರಂದು ದಹಿಸಿದ್ದರು. ದೇಹದ ಬೂದಿ ಮತ್ತು ಅವಶೇಷಗಳಷ್ಟೇ ಪತ್ತೆಯಾಗಿದ್ದ ಕ್ಲಿಷ್ಟಕರ ಎನಿಸುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 500ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿ ಆರೋಪಿಗಳನ್ನು ಅ.25ರಂದು ಬಂಧಿಸಿದ್ದರು. ಆದರೆ, ಹೆಚ್ಚಿನ ತನಿಖೆಯ ಸಲುವಾಗಿ ತೆಲಂಗಾಣಕ್ಕೆ ಆರೋಪಿ ಅಂಕೂರ್ ರಾಣಾನನ್ನು ಕರೆದುಕೊಂಡು ಹೋಗಿದ್ದಾಗ ಪರಾರಿಯಾಗಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.