ಸುಂಟಿಕೊಪ್ಪ: ಇಲ್ಲಿನ ಶ್ರೀಕ್ಷೇತ್ರ ಅಯ್ಯಪ್ಪ ಸ್ವಾಮಿ ದೇವಾಲಯದ 53ನೇ ವರ್ಷದ ಮಂಡಲ ಪೂಜೆ ಉತ್ಸವದ ಅಂಗವಾಗಿ ಬುಧವಾರ ಅದ್ದೂರಿ ಶೋಭಯಾತ್ರೆ ನಡೆಯಿತು.

ಸಂಜೆ 7ಗಂಟೆಗೆ ದೇವಾಲಯದಲ್ಲಿ ಪೂಜೆ ನಂತರ ಅಯ್ಯಪ್ಪ ಕ್ಷೇತ್ರದಿಂದ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ಜರುಗಿತು.

ಚಂಡೆಮೇಳದೊಂದಿಗೆ ನೂರಾರು ಸಂಖ್ಯೆಯ ಹೆಣ್ಣು ಮಕ್ಕಳು ದೀಪ ಹಿಡಿದು ಶ್ರದ್ಧಾಭಕ್ತಿಯಿಂದ ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಮಹಾಗಣಪತಿ ದೇವಾಲಯದವರೆಗೆ, ಪಟ್ಟಣ ಪ್ರಮುಖ ಬೀದಿಯಲ್ಲಿ ಅಯ್ಯಪ್ಪ ಸ್ವಾಮಿಯ ಉದ್ಘೋಷದೊಂದಿಗೆ ಗದ್ದೆಹಳ್ಳದವರೆಗೆ ಸಾಗಿ ದೇವಾಲಯದಲ್ಲಿ ಸಮಾಪ್ತಿಗೊಂಡಿತು.

ಮೆರವಣಿಗೆ ನಡುವೆ ಪಟಾಕಿಗಳ ಆರ್ಭಟ ಮತ್ತು ಬಾನಂಗಳದಲ್ಲಿ ಬಣ್ಣಬಣ್ಣದ ಸಿಡಿಮದ್ದುಗಳ ಚಿತ್ತಾರ ಜನಾಕರ್ಷಣೆಗೊಂಡಿತು.
ಪುಟಾಣಿ ಮಕ್ಕಳು ಅಯ್ಯಪ್ಪನ ಗೀತೆ ಹಾಡುತ್ತಾ ಸಾಗಿದರು.

ದೇವಾಲಯದ ಪ್ರಧಾನ ಅರ್ಚಕ ಗಣೇಶ್ ಭಟ್ ನೇತೃತ್ವದಲ್ಲಿ ದೀಪರಾಧನೆ ನೆರವೇರಿತು. ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದೊಂದಿಗೆ ವಾರ್ಷಿಕ ಮಂಡಲ ಪೂಜೆ ಉತ್ಸವಕ್ಕೆ ತೆರೆ ಬಿದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.