ಶನಿವಾರಸಂತೆ: ಇಲ್ಲಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ವಿವಾಹ ಸಮಾರಂಭವೊಂದರಲ್ಲಿ ಸಿಕ್ಕಿದ ಚಿನ್ನದ ಬ್ರಾಸ್ಲೆಟ್‌ನ್ನು ಬಳ್ಳಾರಿಯ ಕಾರ್ತಿಕ್ ಎಂಬುವವರು ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಕುಜಗೇರಿ ಗ್ರಾಮದ ಸಿದ್ದೇಗೌಡ ಅವರ ಮಗಳ ವಿವಾಹ ಸಮಾರಂಭ ಇಲ್ಲಿ ನಡೆಯುತ್ತಿತ್ತು. ಈ ವೇಳೆ ಅದೇ ಗ್ರಾಮದ ದಿವೇಶ್ ಎಂಬುವರು ತಮ್ಮ ಕೈಯಲ್ಲಿದ್ದ 18 ಗ್ರಾಂ ಚಿನ್ನದ ಬ್ರಾಸ್ಲೆಟ್ ಆಕಸ್ಮಿಕವಾಗಿ ಕಳೆದುಕೊಂಡರು. ಈ ಆಭರಣವು ಬಳ್ಳಾರಿಯಿಂದ ಬಂದಿದ್ದ ಕಾರ್ತಿಕ್ ಎಂಬುವವರಿಗೆ ಸಿಕ್ಕಿತು. ಸಿಕ್ಕಿದಾಕ್ಷಣ ಕಾರ್ತಿಕ್ ಅವರು ಮದುವೆ ಮನೆಯವರಿಗೆ ನೀಡಿ, ಯಾರಾದರೂ ಕಳೆದುಕೊಂಡಿದ್ದೇವೆ ಎಂದು ಬಂದರೆ ಅವರಿಗೆ ನೀಡುವಂತೆ ತಿಳಿಸಿ ವಾಪಸ್ ತೆರಳಿದರು.

ದಿವೇಶ್ ಅವರು ತಾವು ಕಳೆದುಕೊಂಡಿದ್ದ ಬ್ರಾಸ್ಲೆಟ್ ಕುರಿತು ಮದುವೆ ಮನೆಯವರನ್ನು ವಿಚಾರಿಸಿದಾಗ ಅವರು ಕಾರ್ತಿಕ್ ನೀಡಿದ್ದ ಬ್ರಾಸ್ಲೆಟ್‌ನ್ನು ನೀಡಿದ್ದಾರೆ. ನಂತರ, ದಿವೇಶ್ ಅವರು ಕಾರ್ತಿಕ್ ಅವರಿಗೆ ಕರೆ ಮಾಡಿ ಅವರ ಪ್ರಾಮಾಣಿಕತೆಗೆ ಧನ್ಯವಾದಗಳನ್ನು ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.