ಸೋಮವಾರಪೇಟೆ: ತಾಲ್ಲೂಕಿನ ಐಗೂರು ಗ್ರಾಮದಲ್ಲಿ ಹರಿಯುವ ಚೋರನ ಹೊಳೆಯಲ್ಲಿ ಈಗ ಮುಂಗಾರಿನ ಆರ್ಭಟದಿಂದಾಗಿ ನೀರಿನ ಪ್ರಮಾಣ ಅಧಿಕವಿದ್ದು, ದೇವಾಲಯದ ಸಮೀಪದ ಬಂಡೆಕಲ್ಲುಗಳಿಂದ ಧುಮ್ಮಿಕ್ಕುವ ಚೋರನ ಜಲಪಾತ ದಾರಿಹೋಕರನ್ನೂ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಸುತ್ತಲೂ ಕಾಫಿ ತೋಟ ಮತ್ತು ಭತ್ತದ ಗದ್ದೆಗಳ ನಡುವೆ ಇರುವ ಈ ಹೊಳೆಗೆ, ವರ್ಷವಿಡೀ ಸ್ಥಳೀಯರು ತೆರಳಿ ವಿಹರಿಸುತ್ತಾರೆ. ಆದರೆ, ಜಲಪಾತ ವೀಕ್ಷಣೆಗೆ ಸರಿಯಾದ ಸ್ಥಳವಿಲ್ಲದೆ, ವಿಶಾಲವಾದ ಸ್ಥಳದಲ್ಲಿ ಹರಿಯುವ ಸ್ಥಳದಲ್ಲಿ ದೂರದಿಂದಲೇ ನಿಂತು ನೋಡಬೇಕಿದೆ.

ಶಾಂತಳ್ಳಿ ಹೋಬಳಿಯಲ್ಲಿ ಜನ್ಮ ತೆಳೆಯುವ ಚೋರನ ಹೋಳೆ, ತಲ್ತಾರೆಶೆಟ್ಟಳ್ಳಿ, ಅಭಿಮಠ, ತಾಕೇರಿ, ಕಿರಗಂದೂರು, ಐಗೂರು, ಯಡವಾರೆ, ಗರಗಂದೂರಿನ ಮೂಲಕ ಹಾರಂಗಿ ಆಣೆಕಟ್ಟೆಯನ್ನು ಸೇರುತ್ತದೆ. ಹಾರಂಗಿ ಹೊಳೆಗೆ ಸೇರುವ ಸಂಗಮದ ಗರಗಂದೂರಿನಲ್ಲಿ ಒಂದು ಚಿಕ್ಕ ದ್ವೀಪವನ್ನು ಸೃಷ್ಟಿಸುತ್ತದೆ. ನೂರಾರು ಎಕರೆ ಕೃಷಿ ಭೂಮಿಗೆ ನೀರನ್ನು ಒದಗಿಸುವ ಇದು ಈ ಭಾಗದ ಪ್ರಮುಖ ಹೊಳೆಯಾಗಿದೆ.

ಹೊಳೆ ಹರಿಯುವ ಮಾರ್ಗ ಮಧ್ಯೆ ಐಗೂರು ಗ್ರಾಮದಲ್ಲಿ 2 ಜಲಪಾತಗಳನ್ನು ಸೃಷ್ಟಿಸಿದರೂ, ಅದರಲ್ಲಿ ಚಿಕ್ಕ ಜಲಪಾತವನ್ನು ಮಾತ್ರ ಕಾಣಲು ಸಾಧ್ಯ. ವಿಶಾಲವಾಗಿ ಬಂಡೆಗಳ ನಡುವೆ ಸೃಷ್ಟಿಯಾಗಿರುವ ಈ ಜಲಪಾತ 30 ಅಡಿಗಳ ಮೇಲಿನಿಂದ ಧುಮ್ಮಿಕ್ಕುತ್ತಿದ್ದು, ನೋಡುಗರ ಆಕರ್ಷಣೀಯ ಸ್ಥಳವಾಗಿದೆ. ಇಲ್ಲಿಯ ಬಂಡೆಗಳಲ್ಲಿ ಕುಂಬಕುಳಿ ಇದ್ದು, ವಿದ್ಯಾರ್ಥಿಗಳನ್ನು ಶೈಕ್ಷಣಿಕ ಅಭ್ಯಾಸಕ್ಕೆ ಕರೆತರುವುದು ವಾಡಿಕೆಯಾಗಿದೆ.

ಈ ಜಲಪಾತವು ಸೋಮವಾರಪೇಟೆಯಿಂದ 12 ಕಿಲೋ ಮೀಟರ್ ದೂರದ ಐಗೂರು ಬಸ್ ನಿಲ್ದಾಣದಲ್ಲಿ ಇಳಿದು ಅಲ್ಲಿಂದ 1.5 ಕಿಲೋ ಮೀಟರ್ ದೂರ ಸಾಗಿದರೆ, ಅಲ್ಲಿಯೇ ಪಾಷಾಣ ಮೂರ್ತಿ ದೇವಾಲಯದ ಬಳಿಯಿಂದ ಜಲಪಾತ ವೀಕ್ಷಣೆಗೆ ತೆರಳಬಹುದಾಗಿದೆ. ಮಡಿಕೇರಿಯಿಂದಲೂ ಈ ರಸ್ತೆಯ ಮೂಲಕವೇ ಬರಬಹುದಾಗಿದೆ.

ಚೋರನ ಹೊಳೆಯಲ್ಲಿ ಮತ್ತೊಂದು ಸಿರಕಲಗುಂಡಿ ಜಲಪಾತ ಇದ್ದು, ಇದರ ವೀಕ್ಷಣೆಗೆ ಸ್ಥಳವಿಲ್ಲದಿರುವುದರಿಂದ ಹೆಚ್ಚಿನವರು ಇದರಿಂದ ದೂರವಾಗಿದ್ದಾರೆ. ಇದು ಸುಮಾರು 90 ಅಡಿ ಮೇಲಿನಿಂದ ಧುಮ್ಮಿಕ್ಕುತ್ತಿದ್ದು, ಮಳೆ ಕಡಿಮೆಯಾದ ಸಮಯದಲ್ಲಿ ಸ್ಥಳೀಯರು ತೆರಳಿ ವೀಕ್ಷಿಸುತ್ತಾರೆ. ಈ ಜಲಪಾತಕ್ಕೆ ತೆರಳಿ ವೀಕ್ಷಣೆ ಮಾಡಲು ಅವಕಾಶ ಮಾಡಿದಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸಬಹುದು. ಇಲಾಖೆ ಕೂಡಲೇ ಇದರತ್ತ ಗಮನ ಹರಿಸಬೇಕು ಎಂದು ಹೊಸತೋಟ ಗ್ರಾಮದ ಕೆ.ಪಿ.ದಿನೇಶ್ ತಿಳಿಸಿದರು.

ಗರಗಂದೂರಿನಲ್ಲಿ ಚಿಕ್ಕ ದ್ವೀಪವನ್ನು ಸೃಷ್ಟಿಸುವ ಹೊಳೆ 90 ಅಡಿ ಮೇಲಿನಿಂದ ಧುಮ್ಮಿಕ್ಕುವ ಜಲಧಾರೆ ಜಲಪಾತ ವೀಕ್ಷಣೆಗೆ ಸರಿಯಾದ ಸ್ಥಳವಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.