ಕುಶಾಲನಗರ: ಜ್ಞಾನವ್ಯಾಪಿ ಮಂದಿರದ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದ ಸಭೆಯೊಂದರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 41 ವಕೀಲರ ವಿರುದ್ಧ ದಾಖಲಾಗಿರುವ ಪ್ರಕರಣ ಖಂಡಿಸಿ ಕುಶಾಲನಗರದಲ್ಲಿ ವಕೀಲರು ಬುಧವಾರ ನ್ಯಾಯಾಲಯ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.

ವಕೀಲರೊಬ್ಬರು 41 ವಕೀಲರ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದನ್ನು ಖಂಡಿಸಿ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದಲ್ಲಿ ಕಲಾಪ ಬಹಿಷ್ಕಾರ ಮಾಡಿ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ನಾಗೇಂದ್ರ ಬಾಬು ಮಾತನಾಡಿ, ‘ಜ್ಞಾನವ್ಯಾಪಿ ಮಂದಿರದಲ್ಲಿ ಹಿಂದೂಗಳು ಪೂಜೆ ಮಾಡುವ ಅವಕಾಶವನ್ನು ಅಲ್ಲಿಯ ಹೈಕೋರ್ಟ್ ತೀರ್ಪು ನೀಡಿತ್ತು. ಆ ತೀರ್ಪಿನ ಬಗ್ಗೆ ಮಾತನಾಡುವಾಗ ನ್ಯಾಯಾಧೀಶರು, ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿಧಾನದ ಬಗ್ಗೆ ಕೆಟ್ಟದಾಗಿ ಮಾತನಾಡಿದ ರಾಮನಗರದ ವಕೀಲರ ಮೇಲೆ ದೂರನ್ನು ನೀಡಲಾಗಿತ್ತು. ಆದರೆ ವಕೀಲರು ಪ್ರತಿ ದೂರನ್ನು ಸಲ್ಲಿಸಿ ಮೇರೆಗೆ 41 ವಕೀಲರ ಮೇಲೆ ರಾಮನಗರದಲ್ಲಿ ಎಫ್‌ಐಆರ್ ಆಗಿದೆ. ಈ ಘಟನೆಯನ್ನು ಖಂಡಿಸಿ ನ್ಯಾಯಾಲಯದ ಕಲಾಪದಿಂದ ದೂರ ಉಳಿದಿದ್ದೇವೆ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್, ಎಸ್.ಕೆ.ಮಂಜುನಾಥ್, ಪಿ.ಆರ್.ರಾಬಿನ್, ಮೋಹನ್ ಕುಮಾರ್, ರವೀಂದ್ರ, ನವೀನ್, ಜಿ.ಎಲ್.ಸವಿತಾ, ಕೆ.ಎಸ್.ರಾಘವೇಂದ್ರ, ಜಯರಾಮ್, ಕೆ.ಪಿ.ಚಂದ್ರಿಕಾ, ವೈಶಾಲಿ, ಕೆ.ಜೆ.ನವೀನ್, ಬಿ.ಬಿ.ಚಂದನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.