ನಾಪೋಕ್ಲು: ತುಲಾ ಸಂಕ್ರಮಣದ ಪ್ರಯುಕ್ತ ಅ.16ರಂದು ಭಾಗಮಂಡಲದಿಂದ ತಲಕಾವೇರಿಗೆ ಕೊಂಡೊಯ್ದು ಕಾವೇರಿ ಮಾತೆಗೆ ತೊಡಿಸಿದ್ದ ಚಿನ್ನಾಭರಣಗಳನ್ನು ಸೋಮವಾರ ಶಾಸ್ರೋಕ್ತವಾಗಿ ತಂದು ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಲಾಯಿತು.

ಜಾತ್ರೆಯ ಅಂಗವಾಗಿ ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ ಅವರು ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಂದ ಆಭರಣಗಳನ್ನು ಪಡೆದು ತಲಕಾವೇರಿಯಲ್ಲಿ ಮಾತೆಗೆ ತೊಡಿಸಿದ್ದರು. ಕಿರುಸಂಕ್ರಮಣ ವರೆಗೆ ಕಾವೇರಿ ಕುಂಡಿಕೆಯಲ್ಲಿ ಆಭರಣ ಹಾಗೂ ಬೆಳ್ಳಿಯ ಕವಚಗಳನ್ನು ತೊಡಿಸಲಾಗಿತ್ತು. ಸಂಕ್ರಮಣ ಮುಗಿದ ಬಳಿಕ ಭಂಡಾರವನ್ನು ತರಲಾಯಿತು.

ಚಿನ್ನಾಭರಣಗಳನ್ನು ಮರಳಿ ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಲಾಯಿತು. ಬಳಿಕ ಹುಂಡಿ ಎಣಿಕೆ ಮಾಡಲಾಯಿತು. ಅಕ್ಟೋಬರ್ 29ರಿಂದ ನವಂಬರ್ 18ರವರೆಗೆ ತಲಕಾವೇರಿ ಮತ್ತು ಭಾಗಮಂಡಲ ಎರಡೂ ಕ್ಷೇತ್ರಗಳಲ್ಲಿ ಒಟ್ಟು ₹10,93,326 ಸಂಗ್ರಹವಾಗಿದೆ. ತಲಕಾವೇರಿ ಕ್ಷೇತ್ರದಲ್ಲಿ ₹5,39,810 ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ₹3,97, 500 ಹಾಗೂ ಭಗಂಡೇಶ್ವರ ದೇವಾಲಯದ ಅನ್ನಸ೦ತ ರ್ಪಣೆಯಿಂದ ₹1,56 ,016 ಸಂಗ್ರಹವಾಗಿದೆ.

ಜಾತ್ರೆಯ ಅಂಗವಾಗಿ ಭಾಗಮಂಡಲದಲ್ಲಿ ಒಂದು ತಿಂಗಳ ಕಾಲ ನಂದಾದೀಪವನ್ನು ಹಾಗೂ ಅಕ್ಷಯ ಪಾತ್ರೆಯನ್ನು ಇರಿಸಲಾಗಿದ್ದು ಸಾಂಪ್ರದಾಯಿಕ ಆಚರಣೆ ಸೋಮವಾರ ಸಮಾಪ್ತಿಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.