ಮಡಿಕೇರಿ: ದೇಶದಲ್ಲಿರುವಂತೆಯೇ ಕೊಡಗು ಜಿಲ್ಲೆಯಲ್ಲಿಯೂ ದಿನೇ ದಿನೇ ಮಧುಮೇಹ (ಸಕ್ಕರೆ ಕಾಯಿಲೆ) ಹಾಗೂ ರಕ್ತದೊತ್ತಡ (ಬಿ.ಪಿ)ದಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ವರ್ಷವೂ ಈ ಕಾಯಿಲೆಪೀಡಿತರ ಸಂಖ್ಯೆ ಏರುಗತಿಯಲ್ಲೇ ಇದೆ.

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಕೇವಲ ಶೇ 9ರಷ್ಟಿದ್ದ ಮಧುಮೇಹದಿಂದ ಬಳಲುವವರ ಸಂಖ್ಯೆ ಈ ವರ್ಷ ಶೇ 12ಕ್ಕೆ ಹೆಚ್ಚಿದೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತವೆ.

ಪ್ರಸಕ್ತ ಸಾಲಿನಲ್ಲಿ ಈವರೆಗೆ 30 ವರ್ಷ ತುಂಬಿದ 2.79 ಲಕ್ಷ ಜನರು ಪರೀಕ್ಷೆಗೆ ಒಳಗಾಗಿದ್ದರು. ಅವರ ಪೈಕಿ 30,067 ಮಂದಿಗೆ ಮಧುಮೇಹ ಇರುವುದು ಪತ್ತೆಯಾಗಿದೆ. ಹಾಗೆಯೇ, 47,758 ಮಂದಿಗೆ ರಕ್ತದೊತ್ತಡ ಇರುವುದು ಗೊತ್ತಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್ಕುಮಾರ್ ಹೇಳುತ್ತಾರೆ.

ಜಿಲ್ಲೆಯಲ್ಲಿರುವ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಮಧುಮೇಹ ಹಾಗೂ ರಕ್ತದೊತ್ತಡದ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ಲಭ್ಯವಿದೆ. ಉಚಿತವಾಗಿಯೇ ನೀಡಲಾಗುವ ಔಷಧವನ್ನು ನಿಯಮಿತವಾಗಿ ಸೇವಿಸಬೇಕು. ಇದರಿಂದ ಮುಂದೆ ಅನಾರೋಗ್ಯ ಇನ್ನಷ್ಟು ಉಲ್ಬಣಗೊಳ್ಳದೇ ಇರುವುದು ತಪ್ಪುತ್ತದೆ ಎಂದು ವಿವರಿಸುತ್ತಾರೆ.

ಒಂದು ವೇಳೆ ರಕ್ತದೊತ್ತಡ, ಮಧುಮೇಹದ ಲಕ್ಷಣಗಳೇನಾದರೂ ಕಂಡು ಬಂದರೆ ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ವೈದ್ಯರ ಸಲಹೆ ಪಡೆಯುವುದು ಉತ್ತಮ. ಮಧುಮೇಹ, ರಕ್ತದೊತ್ತಡ ಅತಿ ಹೆಚ್ಚಾದರೆ ಮಾತ್ರ ಅವರು ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಇಲ್ಲವೇ ಜಿಲ್ಲಾಸ್ಪತ್ರಗೆ ಕಳುಹಿಸುತ್ತಾರೆ. ಅಲ್ಲೂ ಸಹ ಉಚಿತ ಚಿಕಿತ್ಸೆ ಹಾಗೂ ಉಚಿತ ಔಷಧ ನೀಡುವಿಕೆ ಇದೆ.

ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲೂ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಟೈಪ್–1 ಮಧುಮೇಹ ಇವರಲ್ಲಿ ಅಧಿಕವಾಗುತ್ತಿದೆ. ಹಾಗಾಗಿ, ಮಕ್ಕಳನ್ನು ಜಂಕ್ ಫುಡ್ಗಳಿಂದ ದೂರವಿರಿಸಬೇಕು, ಮೊಬೈಲ್, ಟಿವಿಗಳ ಬದಲಿಗೆ ಆಟ, ದೈಹಿಕ ವ್ಯಾಯಾಮಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಹೇಳುತ್ತಾರೆ.

ದೇಶದಲ್ಲೂ ಮಧುಮೇಹಿಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟದ (ಐಡಿಎಫ್) ವರದಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ 20ರಿಂದ 77 ವರ್ಷ ವಯಸ್ಸಿನ 7.7 ಕೋಟಿ ಜನರು ಮಧುಮೇಹ ಸಮಸ್ಯೆ ಹೊಂದಿದ್ದಾರೆ. ಮಧುಮೇಹದ ಹರಡುವಿಕೆಯು 2009ರಲ್ಲಿ ಶೇ 7.1ರಷ್ಟಿದ್ದದ್ದು, 2019ರ ವೇಳೆಗೆ ಅದು ಶೇ 8.9ಏರಿಕೆಯಾಗಿತ್ತು. ಜನರ ಜೀವನಶೈಲಿ ಇದೇ ರೀತಿ ಮುಂದುವರಿದರೆ ಮಧುಮೇಹಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳು ಅಧಿಕ ಇದೆ.

ಮಧುಮೇಹದಿಂದ ನರರೋಗ, ಮೂತ್ರಕೋಶ ಸಂಬಂಧಿ ರೋಗ ಮತ್ತು ಕಣ್ಣಿನ ಸಮಸ್ಯೆಯಂತಹ ಕಾಯಿಲೆಗಳ ಜೊತೆಗೆ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನಂತಹ ಗಂಭೀರ ರೋಗಗಳೂ ಬರಬಹುದು. ಹಾಗಾಗಿ, ಮಧುಮೇಹ ಬಂದ ಮೇಲೆ ಅದನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡು ವೈದ್ಯರಿಂದ ಚಿಕಿತ್ಸೆ, ಔಷಧ ಪಡೆದುಕೊಳ್ಳಲೇ ಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಮುಂದೆ ಅಪಾಯ ಕಟ್ಟಿಟ್ಟಬುತ್ತಿ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.