ಮಡಿಕೇರಿ: ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬೆಲಿಟಿ ಹಾಗೂ ರೋಟರಿ ಮಿಸ್ಟಿ ಹಿಲ್ಸ್, ಜಿಲ್ಲಾ ವಿಕಲಚೇತನರ ಸಂಘದ ವತಿಯಿಂದ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ರೆಡ್ಕ್ರಾಸ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 30 ವಿಶೇಷ ಚೇತನರಿಗೆ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು.

ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಕೆ.ಜಿ.ವಿಮಲಾ ಮಾತನಾಡಿ, ‘ಹಲವು ಸಂಘ, ಸಂಸ್ಥೆಗಳು ಒಟ್ಟಾಗಿ ಸೇರಿದ ವಿಕಲಚೇತನರಿಗೆ ಅಗತ್ಯ ಇರುವ ಸಾಧನ ಸಲಕರಣೆಗಳನ್ನು ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ರೆಡ್ಕ್ರಾಸ್ನ ಕೊಡಗು ಜಿಲ್ಲಾ ಘಟಕದ ಸಭಾಪತಿ ರವೀಂದ್ರ ರೈ ಮಾತನಾಡಿ, ‘ಸಂಘ, ಸಂಸ್ಥೆಗಳು ನೀಡುವ ಈ ಸಾಧನ ಸಲಕರಣೆಗಳನ್ನು ಬಳಕೆ ಮಾಡಿ. ಏನೇ ರಿಪೇರಿ ಬಂದರೂ ಅದನ್ನು ನಮಗೆ ತಿಳಿಸಿ’ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಮೂವ್ಮೆಂಟ್ನ ಸಲಹಾ ಸಮಿತಿ ಸದಸ್ಯರಾದ ಅಜಯ್ ಸೂದ್, ರೋಟರಿ ವಿಸ್ಟಿಹಿಲ್ಸ್ನ ನಿಯೋಜಿತ ಅಧ್ಯಕ್ಷ ಮಧುಸೂದನ್, ಜಿಲ್ಲಾ ವಿಕಲಚೇತನರ ಸಂಘದ ಅಧ್ಯಕ್ಷ ಮಹೇಶ್ವರ, ರೆಡ್ಕ್ರಾಸ್ ಕಾರ್ಯದರ್ಶಿ ಎಚ್.ಆರ್.ಮುರಳೀಧರ, ಸ್ವಾಮಿ ವಿವೇಕಾನಂದ ಮೂವ್ಮೆಂಟ್ನ ಅಂಕಚಾರಿ, ತಾಂತ್ರಿಕ ಸಿಬ್ಬಂದಿ ನಾಗೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.