ಮಡಿಕೇರಿ: ನಗರದ ರಸ್ತೆಗಳಲ್ಲಿ ಶನಿವಾರ ರಾತ್ರಿ ಸಾಲುದೀಪಗಳಂತೆ ಹೊರಟ ಬೆಳಕಿನ ದಿಬ್ಬಣವು ನಾಡಿನ ದಸರಾ ಮಹೋತ್ಸವಕ್ಕೆ ಸಂಭ್ರಮದ ತೆರೆ ಎಳೆಯಿತು.

ಇಲ್ಲಿನ ಪೇಟೆ ಶ್ರೀರಾಮಮಂದಿರದ ಮಂಟಪವು ಅಡಿ ಇಡುತ್ತಿದ್ದಂತೆ ದಶಮಂಟಪಗಳ ಶೋಭಾಯಾತ್ರೆಗೆ ಸಾಂಪ್ರದಾಯಿಕ ಚಾಲನೆ ಸಿಕ್ಕಿತು. ‘ವಿಷ್ಣುವಿನ ಮತ್ಯ್ಸಾವತಾರ’ ಕಥಾಪ್ರಸಂಗವನ್ನು ಪ್ರದರ್ಶಿಸುತ್ತಾ ಸಾಗಿದ ಮಂಪಟವನ್ನು ರಸ್ತೆಯಲ್ಲಿದ್ದ ಸಾವಿರಾರು ಮಂದಿ ಕಣ್ತುಂಬಿಕೊಂಡರು.

ನಂತರ ಒಂದರ ಮೇಲೋಂದರಂತೆ ಮಂಟಪಗಳು ಹೊರಡಲು ಅನುವಾದವು. ನಗರದ ಎಲ್ಲೆಡೆ ಜನಸಾಗರ ಪ್ರವಾಹದೋಪಾದಿಯಲ್ಲಿ ನುಗ್ಗಿ ಬಂದಿತು. ವಾಹನ ಸಂಚಾರಕ್ಕಿರಲಿ, ನಡೆಯಲೂ ಒಂದಿನಿತೂ ಜಾಗವಿಲ್ಲದ ಸ್ಥಿತಿ ಹಲವೆಡೆ ಕಂಡು ಬಂತು.

ಪೇಟೆ ಶ್ರೀರಾಮಂದಿರದ ನಂತರ ದೇಚೂರು ಶ್ರೀರಾಮಮಂದಿರವು ‘ಕಾಳಿಂಗ ಮರ್ಧನ’, ದಂಡಿಯ ಮಾರಿಯಮ್ಮ ‘ಕೌಶಿಕೆ ಮಹಾತ್ಮೆ’, ಚೌಡೇಶ್ವರಿ ದೇಗುಲವು ‘ಅರುಣಾಸುರ ವಧೆ’, ಕಂಚಿ ಕಾಮಾಕ್ಷಿಯಮ್ಮ ದೇವಾಲಯ ‘ಸಿಂಧೂರ ಗಣಪತಿ’, ಚೌಟಿ ಮಾರಿಯಮ್ಮ ‘ಕದಂಬ ಕೌಶಿಕೆ’, ಕೋದಂಡರಾಮ ದೇಗುಲ ‘ರಾಮನಿಂದ ರಾವಣನ ಸಂಹಾರ’, ಕೋಟೆ ಮಾರಿಯಮ್ಮ ದೇಗಲುವು ‘ಕೃಷ್ಣನ ಬಾಲಲೀಲೆ, ಕಂಸವಧೆ’, ಕೋಟೆ ಮಹಾಗಣಪತಿ ದೇವಾಲಯವು ‘ಅಜಗರ–ಶಲಭಾಸುರ ವಧೆ’, ಕರವಲೆ ಭಗವತಿ ದೇಗಲವು ‘ಕೊಲ್ಲೂರು ಮೂಕಾಂಬಿಕೆ ಮಹಾತ್ಮೆ’ ಕಥಾಪ್ರಸಂಗವನ್ನ ತನ್ನ ಮಂಪಟಗಳಲ್ಲಿ ನಗರದ ವಿವಿಧೆಡೆ ಪ್ರಸ್ತುತಪಡಿಸಿದವು.

ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಸುಮಾರು 2 ಸಾವಿರಕ್ಕೂ ಹೆಚ್ಚು ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ತಲಾ 15 ಪೊಲೀಸರನ್ನು ಒಳಗೊಂಡು ‘ಜಂಬೊ’ ತಂಡಗಳನ್ನು ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ನಿಯೋಜಿಸಲಾಗಿತ್ತು.

ಗಾಂಧಿ ಮೈದಾನ, ಆಂಜನೇಯ ದೇವಾಲಯ, ಕೊಡವ ಸಮಾಜದ ಮುಂಭಾಗ, ಹೋಟೆಲ್ ಪಾಪ್ಯೂಲರ್ ಮುಂಭಾಗ, ವಿನೋದ್ ಮೆಡಿಕಲ್ಸ್ ಬಳಿ, ಕಾವೇರಿ ಕಲಾಕ್ಷೇತ್ರದ ಮುಂಭಾಗ, ಮೆಟ್ರೊ ಫ್ರೆಷ್ ಸಮೀಪ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ, ನಗರ ಪೊಲೀಸ್ ಠಾಣೆ ಮುಂಭಾಗ, ಸಿಂದೂರ್ ಬಟ್ಟೆ ಮಳಿಗೆ ಮುಂಭಾಗ ಸೇರಿದಂತೆ ನಗರದ ಹಲವೆಡೆ ದಶಮಂಟಪಗಳು ತಮ್ಮ ತಮ್ಮ ಪ್ರದರ್ಶನಗಳ ರಸದೌತಣವನ್ನೇ ನೋಡಗರಿಗೆ ಉಣಬಡಿಸಿದವು.

ವಿವಿಧ ಹಾಡುಗಳಿಗೆ, ವಾದ್ಯಸಂಗೀತಕ್ಕೆ ಪ್ರೇಕ್ಷಕರಿಗೆ ಮನತಣಿಯೇ ನರ್ತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.