ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಂಟಿಕೊಪ್ಪ | ಕೋಳಿ ವಿಚಾರಕ್ಕೆ ಜಗಳ: ವ್ಯಕ್ತಿ ಮೇಲೆ ಗುಂಡಿನ ದಾಳಿ

Published : 4 ಅಕ್ಟೋಬರ್ 2024, 16:07 IST
Last Updated : 4 ಅಕ್ಟೋಬರ್ 2024, 16:07 IST
ಫಾಲೋ ಮಾಡಿ
Comments

ಸುಂಟಿಕೊಪ್ಪ: ಸಮೀಪದ ಗದ್ದೆಹಳ್ಳದ ನಾರ್ಗಾಣೆ ಗ್ರಾಮದ ಗಿರಿಯಪ್ಪ ಮನೆ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ಶುಕ್ರವಾರ ಸಂಜೆ ಯಂಕನ ಶ್ರೀರಾಮ್ ಎಂಬಾತ ಏರ್‌ ಗನ್‌ನಿಂದ ಗುಂಡು ಹಾರಿಸಿದ್ದರಿಂದ ಸುಬ್ರಮಣಿ (45) ಗಾಯಗೊಂಡಿದ್ದಾರೆ.

ಗದ್ದೆಹಳ್ಳ ಗಿರಿಯಪ್ಪ ಮನೆ ನಿವಾಸಿ ಯಂಕನ ಶ್ರೀರಾಮ್ ತಮ್ಮ ಮನೆಯ ಅನತಿ ದೂರದಲ್ಲಿರುವ ಸುಬ್ರಮಣಿಯೊಂದಿಗೆ ಕೋಳಿ ವಿಚಾರವಾಗಿ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ಶ್ರೀರಾಮ್ ತನ್ನ ಮನೆಯಲ್ಲಿದ್ದ ಏರ್‌ ಗನ್‌ ತಂದು ಏಕಾಏಕಿ ಸುಬ್ರಮಣಿ ಹೊಟ್ಟೆ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಗಾಯಗೊಂಡ ಸುಬ್ರಮಣಿಯನ್ನು ಕೂಡಲೇ ಸ್ಥಳೀಯರು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ಸುಂಟಿಕೊಪ್ಪ ಪೊಲೀಸರು ಆರೋಪಿ ಶ್ರೀರಾಮ್‌ನನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT