ಗೋಣಿಕೊಪ್ಪಲು: ಜನಪ್ರಿಯ ಹಾಡು, ಸಂಗೀತ ಮತ್ತು ನೃತ್ಯದ ಮೂಲಕ ಪ್ರಸಿದ್ಧ ಸುಮಗ ಸಂಗೀತ ಗಾಯಕ ಚಂದನ್ ಶೆಟ್ಟಿ ಸೋಮವಾರ ರಾತ್ರಿ ಇಲ್ಲಿನ ಕಾವೇರಿ ದಸರಾ ಉತ್ಸವದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು.

ಸೋಮವಾರ ಸಂಜೆ ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯದ ಭರತ ನಾಟ್ಯದ ಬಳಿಕ ನಡೆದ ಚಂದನ್ವ ಶೆಟ್ಟಿ ಅವರ ಸಂಗೀತ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರಿಗೆ ಅಕ್ಷರಶಃ ಮುದ ನೀಡಿತು. ಸುಮಧರ ತಾಳ ಮೇಳಗಳೊಂದಿಗೆ ಸೊಗಸಾಗಿ ಹಾಡಿದ ಚಂದನ್ ಶೆಟ್ಟಿಯ ಸಂಗೀತಕ್ಕೆ ನೃತ್ಯಗಾರ್ತಿಯರು ಸುಂದರವಾಗಿ ಹೆಜ್ಜೆ ಹಾಕಿದರು.

ಪ್ರೇಕ್ಷಕರನ್ನು ಕುಣಿತ ಮತ್ತು ಸಂಗೀತದ ಅಲೆಯಲ್ಲಿ ತೇಲಿಸಿದ ಗಾಯಕ ಚಂದನ್ ಶೆಟ್ಟಿ ಹಾಡಿನ ಮೂಲಕ ಸಂಗೀತ ಪ್ರಿಯರ ಮನ ಗೆದ್ದರು. ಒಂದಕ್ಕಿಂತ ಒಂದು ಮಿಗಿಲಾಗಿದ್ದ ಹಾಡುಗಳ ರಸಾಸ್ವಾದದಲ್ಲಿ ಮುಳುಗಿದ್ದ ಪ್ರೇಕ್ಷಕರಿಗೆ ಹೊತ್ತು ಹೋದುದೇ ತಿಳಿಯಲಿಲ್ಲ.

ಇದಕ್ಕೂ ಮೊದಲು ನಡೆದ ನಾಗರಹೊಳೆ ಗಿರಿಜನ ಸಮಗ್ರ ಅಭಿವೃದ್ಧಿ ಸಂಸ್ಥೆಯ ಗಾಯಕರಾದ ರಮೇಶ್ ಮತ್ತು ತಂಡದವರು ಬುಡಕಟ್ಟು ಸಮೂಹದ ಹಾಡು ಮತ್ತು ನೃತ್ಯ ಮನಮೋಹಕವಾಗಿತ್ತು. ಎರವ ಮತ್ತುಜೇನು ಕುರುಬ ಭಾಷೆಯ ಹಾಡುಗಳ ಮೂಲಕ ಪ್ರಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟರು. ನಂಗ ಜೇನುಕುರ ಮಕ್ಕಳು, ಕಾಡೆ ನಂಗ ದೇವರು. ಅಜ್ಜಯ್ಯ ನಂಗ ದೇವ ಎಂಬ ಹಾಡು ಸಭಿಕರನ್ನು ಕುಣಿಸಿತು. ಒಡೆದ ಡ್ರಂ, ಬಿಂದಿಗೆ, ಹಳೆಯ ಪ್ಲಾಸ್ಟಿಕ್ ಡಬ್ಬ, ಬಿದಿರು ಕೋಲುಗಳೇ ಅವರ ವಾದ್ಯ ಪರಿಕರಗಳಾಗಿದ್ದವು.

Cut-off box - 18ರ ಕಾರ್ಯಕ್ರಮ: 18ರಂದ ಸಂಜೆ 6 ಗಂಟೆಗೆ ಪೊನ್ನಂಪೇಟೆ ಜೈಭೀಮ್ ಗಡಿನಾಡ ಜನಪದ ತಂಡದಿಂದ ಜಾನಪದ ಗೀತೆ ಸಂಜೆ 7ರಿಂದ ಪೊನ್ನಂಪೇಟೆ ನಾಟ್ಯ ಸಂಕಲ್ಪ ತಂಡದಿಂದ ನೃತ್ಯ ರಾತ್ರಿ 8.45ರಿಂದ ಮಂಗಳೂರಿನ ಹಜ್ಜೆನಾದ ಕಲಾ ತಂಡದಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.