ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಫೆ.6ರಂದು ಕೊಡಗಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಅಂದೇ ಭಾಗಮಂಡಲ ಹಾಗೂ ತಲಕಾವೇರಿಗೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅವರ ಪತ್ನಿ ಸವಿತಾ ಕೋವಿಂದ್ ಸಹ ಆಗಮಿಸಲಿದ್ದಾರೆ.

ಅಂದು ಬೆಳಿಗ್ಗೆ ಚೆಟ್ಟಿಮಾನಿ ಬಳಿಯ ತಾತ್ಕಾಲಿಕವಾಗಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ರಾಷ್ಟ್ರಪತಿ ಬಂದಿಳಿಯಲಿದ್ದಾರೆ. ಅಲ್ಲಿಂದ ಸುಮಾರು 12 ಕಿ.ಮೀ ದೂರ ಕಾರ್‌ನಲ್ಲಿ ತಲಕಾವೇರಿಗೆ ತೆರಳಿದ್ದಾರೆ. ಬೆಳಿಗ್ಗೆ 10ರ ವೇಳೆಗೆ ವಿಶೇಷ ಪೂಜೆ ನೆರವೇರಲಿದೆ.

ಅಲ್ಲಿಂದ ಹೆಲಿಪ್ಯಾಡ್ ತಲುಪಿದ ಬಳಿಕ ಹೆಲಿಕಾಪ್ಟರ್‌ನಲ್ಲಿ ಮಡಿಕೇರಿಯ ಗಾಲ್ಫ್ ಮೈದಾನಕ್ಕೆ ಬರಲಿದ್ದಾರೆ. ಅಲ್ಲಿಂದ ನೇರವಾಗಿ ಕಾರ್‌ನಲ್ಲಿ ಸುದರ್ಶನ ಅತಿಥಿಗೃಹಕ್ಕೆ ತೆರಳಲಿದ್ದಾರೆ. ಅತಿಥಿ ಗೃಹದಲ್ಲಿ ಮಧ್ಯಾಹ್ನ ಭೋಜನ ಸವಿಯಲಿದ್ದಾರೆ. ಬಳಿಕ, 3.45ಕ್ಕೆ ನಡೆಯುವ ಮ್ಯೂಸಿಯಂ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಷ್ಟ್ರಪತಿ ಜೊತೆಗೆ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಹ ಮ್ಯೂಸಿಯಂ ಉದ್ಘಾಟನೆಗೆ ಬರುವ ಸಾಧ್ಯತೆಯಿದೆ. ಕೋವಿಡ್ ಕಾರಣದಿಂದ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಪಾಸ್ ಇದ್ದವರಿಗೆ ಮಾತ್ರ ಅವಕಾಶವಿದೆ ಎಂದು ಫೋರಂ ಸದಸ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.