ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ: ವಿದ್ಯುತ್ ಮಾರ್ಗ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಕಿರಗಂದೂರು, ತಾಕೇರಿಯಲ್ಲಿ ವಾರದಿಂದ ವಿದ್ಯುತ್ ಇಲ್ಲ
Published 26 ಜುಲೈ 2024, 3:29 IST
Last Updated 26 ಜುಲೈ 2024, 3:29 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಕಿರಗಂದೂರು, ತಾಕೇರಿ, ತಲ್ತಾರೆಶೆಟ್ಟಳ್ಳಿ, ಬಿಳಿಗೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಡಿತವಾಗಿದ್ದು, ವಿದ್ಯುತ್ ಮಾರ್ಗವನ್ನು ದುರಸ್ತಿಪಡಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಸೆಸ್ಕ್ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.

ಕಿರಗಂದೂರು ಗ್ರಾಮದಲ್ಲಿ 10 ಕಂಬಗಳು ನೆಲಕ್ಕುರುಳಿದ್ದು ಕಳೆದ 20 ದಿನಗಳಿಂದ ವಿದ್ಯುತ್ ಇಲ್ಲ ಎಂದು ಕಿರಗಂದೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಚಿದಾನಂದ ಅಸಮಾಧಾನ ವ್ಯಕ್ತಪಡಿಸಿದರು.

ತಾಕೇರಿ ಗ್ರಾಮದ 40 ಮನೆಗಳಿಗೆ ಒಂದು ವಾರದಿಂದ ವಿದ್ಯುತ್ ಇಲ್ಲದೆ ಸಮಸ್ಯೆಯಾಗಿದೆ. ಕೂಡಲೆ ವಿದ್ಯುತ್ ಮಾರ್ಗ ಸರಿಪಡಿಸಬೇಕು ಎಂದು ತಾಕೇರಿ ಪೊನ್ನಪ್ಪ ಆಗ್ರಹಿಸಿದರು. ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಸೆಸ್ಕ್ ಸಿಬ್ಬಂದಿ ಶಕ್ತಿಮೀರಿ ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ಮುರ್ನಾಲ್ಕು ದಿನಗಳಲ್ಲಿ ಮಾರ್ಗ ಸರಿಪಡಿಸಿ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಎಇಇ ರವಿಕುಮಾರ್ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.

ಗ್ರಾಮಸ್ಥರಾದ ಶಿವಕುಮಾರ್, ಈರಪ್ಪ, ಜೀವನ್, ಸಂದೀಪ್, ಬಿ.ಪಿ.ಅನಿಲ್, ಸುರೇಶ್, ಬಿ.ಎಸ್.ನಾಗೇಶ್, ಸೋಮಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT