ಮಡಿಕೇರಿ: ರಸ್ತೆ ಬದಿಯಲ್ಲಿರುತ್ತಿದ್ದ ವೃದ್ದರಿಗಾಗಿ ವಿಕಾಸ್ ಜನಸೇವ ಟ್ರಸ್ಟ್ ಅಡಿ ಜೀವನದಾರಿ ಆಶ್ರಮ ನಡೆಸುತ್ತಿರುವ ಇಲ್ಲಿನ ರಾಣಿಪೇಟೆ ನಿವಾಸಿ ರಮೇಶ (42), ಅವರ ಪತ್ನಿ ರೂಪಾ (36) ಹಾಗೂ ತಂದೆ ಕರಿಯಪ್ಪ (82) ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದಾರೆ.

ಇವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಹಲವು ವರ್ಷಗಳಿಂದ ರಮೇಶ ಹಾಗೂ ಅವರ ಕುಟುಂಬ ರಸ್ತೆಬದಿಯಲ್ಲಿರುತ್ತಿದ್ದ ನಿರ್ಗತಿಕ ವೃದ್ದರಿಗಾಗಿ ಸುಂಟಿಕೊಪ್ಪ ಸಮೀಪದ ಏಳನೆ ಹೊಸಕೋಟೆ ಗ್ರಾಮದಲ್ಲಿ ಆಶ್ರಮ ನಡೆಸುತ್ತಿದ್ದರು. ನಿತ್ಯ ತಮ್ಮ ಮನೆಯಿಂದಲೆ ಊಟ ತೆಗೆದುಕೊಂಡು ಆಶ್ರಮಕ್ಕೆ ತಲುಪಿಸುತ್ತಿದ್ದರು. ಆಶ್ರಮದಲ್ಲಿ ಸದ್ಯ 40ಕ್ಕೂ ಅಧಿಕ ಮಂದಿ ವೃದ್ದರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.