ಮಡಿಕೇರಿ: ತಾಲ್ಲೂಕಿನ ಮರಗೋಡು ಗ್ರಾಮದಲ್ಲಿ ಬೆಲೆಬಾಳುವ ಮರಗಳ ಹನನ ಮಾಡಿ ಮಾರಾಟ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೊಡಗಿನಲ್ಲಿ ಮರಗಳ್ಳರು ಲಾಕ್‌ಡೌನ್ ಸಮಯವನ್ನೇ ದುರುಪಯೋಗ ಮಾಡಿಕೊಂಡು ಈ ವೇಳೆ ಗ್ರಾಮದ ಕಾಫಿ ತೋಟ ಹಾಗೂ ಪೈಸಾರಿ (ಸರ್ಕಾರಿ ಜಾಗ) ಪ್ರದೇಶದಲ್ಲಿ ಬೆಳೆದಿದ್ದ ಮರಗಳನ್ನ ಕಡಿದು ಸಾಗಣೆ ಮಾಡಲಾಗಿದೆ. ಬೆಟ್ಟ ಪ್ರದೇಶದ ದಟ್ಟಾರಣ್ಯದಲ್ಲೂ ಮರಗಳ ಲೂಟಿ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ. ಭಾರಿ ಬೆಲೆ ಬಾಳುವ ನಂದಿ ಮರಗಳಿಗೆ ಕೊಡಲಿ ಹಾಕಲಾಗಿದೆ. ಅರಣ್ಯ ಇಲಾಖೆಯುವರು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಚೆಟ್ಟಳ್ಳಿ ಮೂಲದ ಮರದ ವ್ಯಾಪಾರಿಯಿಂದ ಈ ಮರ ಹನನ ನಡೆದಿದೆ. ಪೈಸಾರಿ ಜಾಗ ಆಗಿದ್ದು, ಇಲ್ಲಿನ ಮರ ಕಡಿಯಲು ಅನುಮತಿ ಸಿಗುವುದಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಶಾಮೀಲಿಂದ ಮರಗಳ ಹನನ ನಡೆದಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.