ಶನಿವಾರಸಂತೆ: ‘ಮನುಕುಲಕ್ಕೆ ನೈತಿಕತೆಯ ಪಾಠ ಮಾಡುವ ಅಗತ್ಯ ಇದೆ’ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ, ತಪೋವನ ಕ್ಷೇತ್ರ ಮನೆಹಳ್ಳಿ ಮಠದ ವತಿಯಿಂದ ಸಮೀಪದ ನೀರುಗುಂದ ಗ್ರಾಮದ ವೀರಭಧ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ವೀರಭಧ್ರೇಶ್ವರ ಸ್ವಾಮಿ ಜನ್ಮವರ್ಧಂತಿಯ 5ನೇ ವರ್ಷದ ಮಹೋತ್ಸವ ಹಾಗೂ ಬಿಲ್ವಪತ್ರೆ ಮತ್ತು ರುದ್ರಾಕ್ಷಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸತ್ಯ- ಶುದ್ಧ ಸನ್ನಡತೆಯ ಸ್ವಾತಿಕ ಬದುಕಿನ ಸಂಸ್ಕಾರ ಅರುಹಿದ ಚೈತನ್ಯ ಶಕ್ತಿಯೇ ವೀರಭದ್ರ ದೇವರು. ಬದುಕಿನ ಶ್ರೇಷ್ಠ ನಡೆ-ನುಡಿಗೆ ಅಗತ್ಯವಾದ ಧರ್ಮ ಮಾರ್ಗದಲ್ಲಿ ಕೈಹಿಡಿದು ಮುನ್ನೆಡೆಸಲು ಬೆಳಕಿನತ್ತ ಸಾಗುತ್ತಿರುವ ದೇವರು ವೀರಭದ್ರೇಶ್ವರಸ್ವಾಮಿ ಎಂದರು.

ಮಾನವನ ಇಹದ ಬದುಕಿನ ಸ್ವರಗಳಲ್ಲಿ ಇರಬಹುದಾದ ಜನವಿರೋಧಿ ಕೃತ್ಯಗಳ ನಿವಾರಣೆಗೆ ವೀರಭದ್ರೇಶ್ವರಸ್ವಾಮಿ ದೇವರ ಮಹಾಶಕ್ತಿ ಸಂಚರವು ನಿರಂತರವಾಗಿ ಪ್ರಭಾವ ಬೀರುತ್ತದೆ ಎಂದರು.

ಕಲ್ಲುಮಠದ ಮಹಾಂತ ಸ್ವಾಮೀಜಿ ಮಾತನಾಡಿ, ‘ವೀರಭದ್ರೇಶ್ವರಸ್ವಾಮಿ ಧರ್ಮಗಳ ಜೊತೆ ಹೋರಾಡಲು ಅವತರಿಸಿ ಪ್ರೇರಣಾದಾಯಕವಾಗಿದ್ದು, ಅವರ ಅವತಾರವೆ ಅತ್ಯಂತ ವಿಸ್ಮಯ ಮತ್ತು ಪವಾಡ ಮತ್ತು ಸದೃಶ್ಯವಾಗಿದೆ’ ಎಂದರು.

ದೇವಸ್ಥಾನಗಳಲ್ಲಿ ಬೆಳಗಿನ ಜಾವ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮುಂತಾದ ಪೂಜಾ ಕೈಂಕರ್ಯಗಳು ನಡೆದವು. ಈ ವೇಳೆ ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ದೊಡ್ಡಬಳ್ಳಾಪುರ ಮಠದ ನಿಶ್ಚಲದೇಶೀಕೇಂದ್ರ ಸ್ವಾಮೀಜಿ, ನೀರುಗುಂದ ಗ್ರಾಮದ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ, ಕಾರ್ಯದರ್ಶಿ ನಾಗೇಶ್, ಸಮಿತಿ ಸದಸ್ಯರು, ಬೆಂಗಳೂರು ಸಿದ್ದಗಂಗಾ ಶಾಖಾ ಮಠದ ಮಹಿಳಾ ಸಂಘಟನಾ ವೇದಿಕೆ ಅಧ್ಯಕ್ಷೆ ಉಷಾ ಯೋಗಾನಂದ್, ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ರಾಷ್ಟ್ರೀಯ ಸಂಚಾಲಕ ಎಸ್.ಮಹೇಶ್, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ದಿವಾಕರ್, ಕಾರ್ಯದರ್ಶಿ ದಯಾನಂದ್, ವೇದಿಕೆ ಸದಸ್ಯರು, ವಿವಿಧ ಸ್ವಾಮೀಜಿಗಳು, ಭಕ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮಕ್ಕೆ ನೀರುಗುಂದ ಶ್ರೀ ವೀರಭದ್ರೇಶ್ವರ ದೇವಾಲಯ ಸಮಿತಿ, ಕೊಡ್ಲಿಪೇಟೆ, ಕಿರಿಕೊಡ್ಲಿ, ಕೋಟೆಯೂರು, ಗೌಡಳ್ಳಿ, ನೇಗಳೆ ಗ್ರಾಮದ ಶ್ರೀ ವೀರಭಧ್ರೇಶ್ವರಸ್ವಾಮಿ ದೇವಾಲಯ ಸಮಿತಿಗಳು ಸಹಯೋಗ ನೀಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.