ಮಡಿಕೇರಿ: ‘ಜಲಲ ಜಲಲ ಜಲ ಧಾರೆ...’ ಎಂಬ ಹಳೆಯ ಹಾಡು ಅಬ್ಬಿಕೊಲ್ಲಿ ಜಲಪಾತ ನೋಡಿದರೆ ನೆನಪಾಗುತ್ತದೆ. ಮಂಗಳೂರಿನಿಂದ ಮಡಿಕೇರಿಗೆ ಬರುವಾಗ ಬೆಟ್ಟ ಏರುತ್ತಿರುವಾಗ ಒಮ್ಮೆಗೆ ರಸ್ತೆ ಬದಿಯಲ್ಲೇ ಕಣ್ಣಿಗೆ ಬೀಳುವ ಈ ಜಲಧಾರೆ ಮಡಿಕೇರಿಗೆ ಒಂದು ಬಗೆಯ ಜಲವೈಭವದ ಸ್ವಾಗತ ಕೋರುವಂತಿದೆ.

ಬೆಟ್ಟಶ್ರೇಣಿಗಳಿಂದ ಜುಳುಜುಳನೇ ಹರಿಯುತ್ತ ಬರುವ ಈ ಜಲಪಾತದ ಅಂದವನ್ನು ನೋಡಿದರೆ ಸಾಕು ಮೈಮನಗಳೆಲ್ಲವೂ ಪುಳಕಗೊಳ್ಳುತ್ತದೆ. ‘ಜಲಲ ಜಲಲ ಜಲ ಧಾರೆ’ ಹಾಡಿನ ಮಾಧುರ್ಯವೇ ಇಲ್ಲಿ ನೋಡುಗರಿಗೆ ಸಿಗುತ್ತದೆ.

ಮಡಿಕೇರಿಯ ಕಡೆಗೆ ಬರುತ್ತಿದ್ದಂತೆ ಆವರಿಸುವ ಚಳಿ, ಕೈಗೆಟುಕಿದಂತೆ ತೇಲುವ ಮೋಡಗಳು, ದಟ್ಟ ಮಂಜು ಇವುಗಳ ಮಧುರ ಅನುಭವಗಳ ಜೊತೆಗೆ ಈ ಶ್ವೇತ ಸುಂದರ ಜಲಪಾತ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮಾತ್ರವಲ್ಲ, ನೋಡಿದ ಮೇಲೆ ಮತ್ತೂ ನೋಡಬೇಕು ಎನಿಸುತ್ತದೆ.

ಬಂಡೆಗಳ ನಡುವಿನಿಂದ ಬಿಳಿಯ ಬೆಕ್ಕೊಂದು ನುಸುಳಿದಂತೆ, ಹಂಸವೊಂದು ಹೊರಬಂದಂತೆ ಎಂದು ಕೆಲವರಿಗೆ ಅನ್ನಿಸಿದರೆ, ಕ್ಷೀರಧಾರೆಯೊಂದು ಬಂದಂತಹ ಅನುಭವವನ್ನು ಮತ್ತೆ ಕೆಲವರಿಗೆ ನೀಡುತ್ತದೆ.

ಇಂತಹದ್ದೊಂದು ಜಲಪಾತಕ್ಕೆ ಸ್ಥಳೀಯರು ಇಟ್ಟ ಹೆಸರು ಅಬ್ಬಿಕೊಲ್ಲಿ. ಇಂತಹದ್ದೊಂದು ಜಲಪಾತ ನೋಡಲು ಹೆಚ್ಚೇನೂ ಶ್ರಮ ಬೇಕಿಲ್ಲ. ರಸ್ತೆಬದಿಯಲ್ಲೇ ಕಾಣಸಿಗುವ ಈ ಜಲಪಾತವನ್ನು ಖಾಸಗಿ ವಾಹನದಲ್ಲಿ ಹೋಗುವವರು ಒಮ್ಮೆಯಾದರೆ ನಿಲ್ಲಿಸಿ ನೋಡದೇ ಇರಲಾರರು.

ಅಲ್ಲೇ ಪಕ್ಕದಲ್ಲೆ ವಾಹನ ನಿಲ್ಲಿಸಿ, ಜಲಪಾತದ ಸೌಂದರ್ಯವನ್ನು ಸವಿಯುತ್ತಾರೆ. ಮಕ್ಕಳು, ಯುವತಿಯರು ಸೆಲ್ಫೀ ತೆಗೆದುಕೊಳ್ಳಲು ಮುಗಿಬೀಳುತ್ತಾರೆ. ಇಂತಹದ್ದೊಂದು ಜಲಧಾರೆಯ ಚಿತ್ರವನ್ನು ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್ಗಳು, ಫೇಸ್ಬುಕ್, ಇನ್ಸ್ಟಾದಲ್ಲಿ ಹಾಕಿಕೊಂಡು ಸಂಭ್ರಮಿಸುತ್ತಾರೆ.

ಈಗಂತೂ ಇಲ್ಲಿ ಒಂದಷ್ಟು ಅಂಗಡಿಗಳಿದ್ದು, ತಿನಿಸುಗಳು ಸಿಗುತ್ತವೆ. ಅವುಗಳನ್ನು ಮೆಲ್ಲುತ್ತಾ ಜಲಪಾತವನ್ನು ನೋಡುತ್ತಾ ನಿಂತರೆ ಸಮಯ ಹೋಗುವುದು ತಿಳಿಯದು.

ಈ ಸುಂದರ ಜಲಪಾತವನ್ನು ವೀಕ್ಷಿಸಲು ಹೆಚ್ಚೇನು ಶ್ರಮಪಡಬೇಕಿಲ್ಲ. ಮಡಿಕೇರಿ– ಮಂಗಳೂರು ರಸ್ತೆಯ ಜೋಡುಪಾಲ ಸಮೀಪವೇ ಇದೆ.

ಸುಂದರವಾಗಿದೆ ಎಂದು ಮೈಮರೆಯಬಾರದು. ಕೊಲ್ಲಿಯ ಸನಿಹಕ್ಕೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ದೂರದಿಂದಲೆ ನೋಡಿ, ಸಂಚಾರಕ್ಕೆ ತೊಡಕಾಗದ ಹಾಗೆ ಎಚ್ಚರ ವಹಿಸಿಬೇಕಾದ್ದು ನೋಡುಗರ ಜವಾಬ್ದಾರಿ.

ಒಳ್ಳೆಯ ಮಳೆಗೆ ತುಂಬಿ ಹರಿಯುತ್ತಿದೆ ಜಲಧಾರೆ ಬೇರೆಲ್ಲೂ ಸಿಗದ ಸೌಂದರ್ಯ ಈ ಜಲಪಾತದಲ್ಲಿದೆ ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿದೆ ಜಲಪಾತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.