ಮಡಿಕೇರಿ: ಅಪಘಾತಕ್ಕೆ ಒಳಗಾಗಿ ಬೆನ್ನುಹುರಿ ಸಮಸ್ಯೆಯಿಂದ ಅಂಗವೈಕಲ್ಯತೆ ಹೊಂದಿರುವವರು ಇಲ್ಲಿ ಶುಕ್ರವಾರ ಗಾಲಿಕುರ್ಚಿ ಜಾಥಾ ನಡೆಸಿದರು.

ಸೇವಾಭಾರತಿ– ಸೇವಾಧಾಮ ಸಂಸ್ಥೆಯು ವಿಕಾಸ್ ಜನಸೇವಾ ಟ್ರಸ್ಟ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ, ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ, ಅಶ್ವಿನಿ ಆಸ್ಪತ್ರೆ ಸಹಯೋಗದಲ್ಲಿ 23ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಗಾಲಿ ಕುರ್ಚಿ ಜಾಥಾ ಆಯೋಜಿಸಿತ್ತು.

ಅಪಘಾತಕ್ಕೆ ಒಳಗಾಗಿ ಅಂಗವಿಕಲರಾದವರು ಗಾಲಿಕುರ್ಚಿಗಳಲ್ಲಿ ಭಾಗಿಯಾದರು. ಜೊತೆಯಲ್ಲಿ ಹಲವು ವಿದ್ಯಾರ್ಥಿಗಳು ಜಾಥಾದಲ್ಲಿದ್ದರು.

ಹಿರಿಯ ಕಲಾವಿದೆ ರಾಣಿ ಮಾಚಯ್ಯ ಸಹ ಜಾಥಾದಲ್ಲಿ ಹೆಜ್ಜೆ ಹಾಕಿದರು. ಶಾಂತಿನಿಕೇತನದ ಬಳಿಯ ಮಡಿಕೇರಿ- ಮೈಸೂರು ರಸ್ತೆಯಲ್ಲಿ ಸಾಗಿದ ಜಾಥಾ ಜನರಲ್ ತಿಮ್ಮಯ್ಯ ವೃತ್ತದವರೆಗೂ ಸಂಚರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.