ಬಂಗಾರಪೇಟೆ | ನೀರಿನ ಸಮಸ್ಯೆ: ಉಪಯೋಗಕ್ಕೆ ಬಾರದ ಶೌಚಾಲಯಗಳು
ಮಂಜುನಾಥ ಎಸ್
Published : 7 ಅಕ್ಟೋಬರ್ 2024, 5:22 IST
Last Updated : 7 ಅಕ್ಟೋಬರ್ 2024, 5:22 IST
ಫಾಲೋ ಮಾಡಿ
Comments
ಬಂಗಾರಪೇಟೆ ಪಟ್ಟಣದ ದೇಶಿಹಳ್ಳಿಯ ಕಾಮಸಮುದ್ರ ಮುಖ್ಯರಸ್ತೆಯಲ್ಲಿ ನಿರುಪಯುಕ್ತವಾಗಿರುವ ಶೌಚಾಲಯ ಕಟ್ಟಡ
ಬಂಗಾರಪೇಟೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಮುಂಭಾಗ ಇರುವ ಸಾರ್ವಜನಿಕ ಶೌಚಾಲಯ ಸಿತ್ಥಿ
ಶೌಚಾಲಯಗಳು ಇಲ್ಲದ ಕಾರಣ ಜನರಿಗೆ ಬಯಲೇ ಶೌಚವೇ ಗತಿಯಾಗಿದೆ. ಕೆಲವು ಕಡೆ ಶೌಚಾಲಯಗಳಿದ್ದರೂ ಉಪಯೋಗಕ್ಕೆ ಬರುತ್ತಿಲ್ಲ.
ಪ್ರಭಾಕರ ರಾವ್ ಪುರಸಭೆ ಸದಸ್ಯ
ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ನಿರ್ಮಾಣವಾಗಿರುವ ಸಾರ್ವಜನಿಕ ಶೌಚಾಲಯಗಳು ನಿರುಪಯುಕ್ತವಾಗಿವೆ.
ಕೆರೆಕೋಡಿ ಜಗನ್ ಸ್ಥಳೀಯ ನಿವಾಸಿ
ಈಗಾಗಲೇ ನಿರ್ಮಿಸಿರುವ ಶೌಚಾಲಯಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಯೋಗ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿರುವುದು
ಸತ್ಯನಾರಾಯಣ ಮುಖ್ಯಾಧಿಕಾರಿ ಪುರಸಭೆ
ಘೋಷಣೆಗೆ ಸೀಮಿತವಾದ ಯೋಜನೆಗಳು
ಸುತ್ತಮುತ್ತಲಿನ ಪ್ರದೇಶಗಳ ಶುಚಿತ್ವ ಮತ್ತು ಜನರ ಉತ್ತಮ ಆರೋಗ್ಯಕ್ಕಾಗಿ ಕೇಂದ್ರ ಸರ್ಕಾರವು ನಿರ್ಮಲ ಭಾರತ ಸ್ವಚ್ಛ ಭಾರತದ ಯೋಜನೆಗಳಡಿ ಶೌಚಾಲಯಗಳ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಪುರಸಭೆ ವತಿಯಿಂದ ಸಾವಿರಾರು ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಶೌಚಾಲಯಗಳು ನೀರಿನ ಸಮಸ್ಯೆಯಿಂದಾಗಿ ನಿರುಪಯುಕ್ತವಾದಂತಾಗಿವೆ. ಇದರಿಂದಾಗಿ ಸರ್ಕಾರದ ಯೋಜನೆಗಳು ಕೇವಲ ಘೋಷಣೆಗಳಿಗೆ ಸೀಮಿತವಾದಂತಾಗಿವೆ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ. ಜೊತೆಗೆ ಈಗಾಗಲೇ ನಿರ್ಮಾಣವಾಗಿರುವ ಶೌಚಾಲಯಗಳನ್ನು ಬಳಸಲು ಯೋಗ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಬಡಾವಣೆ ಜನರ ಆಗ್ರಹವಾಗಿದೆ.