ಕೋಲಾರ: ‘ದೇಗುಲ, ಶಾಲೆ, ಮಠ, ಸ್ಮಶಾನ ಹಾಗೂ ರೈತರ ಆಸ್ತಿಯನ್ನು ಕಬಳಿಸಿ ವಕ್ಫ್ಗೆ ವರ್ಗಾಯಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡಿಸಿ ನಗರದ ತಾಲ್ಲೂಕು ಕಚೇರಿ ಮುಂದೆ ನ.22, ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷವಾಕ್ಯದೊಂದಿಗೆ ಬಿಜೆಪಿ ಧರಣಿ ಹಮ್ಮಿಕೊಂಡಿದೆ’ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ವೇಣುಗೋಪಾಲ್ ಹಾಗೂ ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ನಗರ ಹೊರವಲಯದ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಅಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಯಲಿದೆ. ಅದೇ ರೀತಿ ಜಿಲ್ಲಾ ಕೇಂದ್ರಗಳಲ್ಲೂ ನಡೆಯಲಿದ್ದು, ಯಾರ ಜಮೀನು ವಕ್ಫ್ಗೆ ವರ್ಗಾವಣೆ ಆಗಿದೆಯೋ ಅವರೆಲ್ಲಾ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಬೇಕು. ಹಾಗೆಯೇ, ರೈತರು, ರೈತ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಧರಣಿಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ಮುನಿಸ್ವಾಮಿ ಮಾತನಾಡಿ, ‘ವಕ್ಫ್ನಿಂದ ತೊಂದರೆ ಅನುಭವಿಸಿದ ಎಲ್ಲರೂ ದಾಖಲೆ ಸಮೇತ ಹೋರಾಟದಲ್ಲಿ ಭಾಗವಹಿಸಬೇಕು. ವಕ್ಫ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಲಾಗುವುದು’ ಎಂದರು.

‘ಪ್ರತಿಭಟನೆ ಅಲ್ಲದೇ, ವಿಜಯೇಂದ್ರ, ಅಶೋಕ, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಈಗಾಗಲೇ ಬಿಜೆಪಿಯ ಮೂರು ತಂಡ ರಚನೆ ಮಾಡಿದ್ದು, ನ.27, 28, 29ರಂದು ರಾಜ್ಯದಾದ್ಯಂತ ಓಡಾಡಿ ವಕ್ಫ್ಗೆ ವರ್ಗಾವಣೆ ಆಗಿರುವ ಜಮೀನು ಬಹಿರಂಗಪಡಿಸಿ ನ್ಯಾಯ ಕೊಡಿಸುತ್ತೇವೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಹೇಳಿದರೆಂದು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ರಾಜ್ಯದ ವಿವಿಧೆಡೆ ಸುಮಾರು 21 ಸಾವಿರ ಎಕರೆ ಜಾಗವನ್ನು ವಕ್ಫ್ಗೆ ಸೇರಿಸಿ ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ವಕ್ಫ್ಗೆ ತಿದ್ದುಪಡಿ ತರುತ್ತಿರುವುದು ಗೊತ್ತಾದ ಮೇಲೆ ಇಷ್ಟೆಲ್ಲಾ ಅವಾಂತರ ನಡೆದಿದೆ. ಸಂವಿಧಾನವನ್ನು ದುರುಪಯೋಗಪಡಿಸಿಕೊಂಡು, ಒಂದು ಸಮುದಾಯ ಹೇಳಿದಂತೆ ಈ ಸರ್ಕಾರ ನಡೆದುಕೊಳ್ಳುತ್ತಿದೆ’ ಎಂದು ದೂರಿದರು.

ಡಾ.ವೇಣುಗೋಪಾಲ್ ಮಾತನಾಡಿ, ‘ಈಗಿರುವ ವಕ್ಫ್ ಕಾಯ್ದೆ ರದ್ದು ಮಾಡಬೇಕು. ಸದ್ಯದಲ್ಲೇ ಹೊಸ ವಕ್ಫ್ ಕಾಯ್ದೆ ಬರಲಿದೆ. ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರ, ಅಕ್ರಮಕ್ಕೆ ಈ ಮೂಲಕ ಮುಕ್ತಿ ಸಿಗಲಿದೆ’ ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಓಂಶಕ್ತಿ ಚಲಪತಿ, ಬಿ.ವಿ.ಮಹೇಶ್, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಅರುಣಮ್ಮ, ಸಾಮಾ ಬಾಬು, ಮಂಜುನಾಥ್, ಶ್ರೀನಿವಾಸ್ ಇದ್ದರು.

ಅಕ್ರಂ ಪಾಷಾ ಸಂವಾದದಲ್ಲಿ ವಕ್ಫ್ಗೆ ಒಂದಿಂಚೂ ಜಾಗ ನೀಡಿಲ್ಲ ಎನ್ನುತ್ತಾರೆ. ನನ್ನ ಜೊತೆ ಬರಲು ಹೇಳಿ. ದೇಗುಲ ಸ್ಮಶಾನ ಶಾಲೆ ಜಾಗವನ್ನು ವಕ್ಫ್ಗೆ ಸೇರಿಸಿರುವುದನ್ನು ತೋರಿಸುತ್ತೇನೆ
ಎಸ್.ಮುನಿಸ್ವಾಮಿ ಮಾಜಿ ಸಂಸದ

ಸಿದ್ದರಾಮಯ್ಯರ ಹೊಗಳುಭಟ್ಟರ ಹುದ್ದೆಗೆ ವರ್ತೂರು ಸೇರಿಕೊಳ್ಳಲಿ

‘ಸಿದ್ದರಾಮಯ್ಯ ಪರವಾಗಿ ಬಿಜೆಪಿಯ ವರ್ತೂರು ಪ್ರಕಾಶ್ ಆ ರೀತಿ ಮಾತನಾಡಬಾರದಿತ್ತು. ಅದು ಅಡ್ಜಸ್ಟ್ಮೆಂಟ್ ರಾಜಕೀಯ ಎಂಬುದು ಸ್ಪಷ್ಟವಾಗುತ್ತದೆ. ಹಿಂದೆ ಅವರೇ ಸಿದ್ದರಾಮಯ್ಯ ಅವರನ್ನು ಹಿಗ್ಗಾಮುಗ್ಗಾ ಬೈಯ್ದಿದ್ದರು. ಈಗ ವರಸೆ ಬದಲಾಗಿದ್ದು ಮಾತಿನ ಮೇಲೆ ಹಿಡಿತ ಇರಬೇಕು. ಬಿಜೆಪಿ ಮುಖಂಡನಾಗಿ ನಾನು ಕಾಂಗ್ರೆಸ್ ಪಕ್ಷವನ್ನು ಸದಾ ವಿರೋಧಿಸುತ್ತೇನೆ. ಬಿಜೆಪಿಯಲ್ಲಿದ್ದಾಗ ಶಿಸ್ತಿನಿಂದ ಇರಬೇಕು. ಸಿದ್ದರಾಮಯ್ಯ ಅವರ ಹೊಗಳುಭಟ್ಟರ ಹುದ್ದೆ ಖಾಲಿ ಇದ್ದರೆ ವರ್ತೂರು ಪ್ರಕಾಶ್ ಹೋಗಿ ಸೇರಿಕೊಳ್ಳಲಿ. ಅವರ ಮೇಲೆ ಕ್ರಮ ಕೈಗೊಳ್ಳುವುದು ಹೈಕಮಾಂಡ್ಗೆ ಬಿಟ್ಟ ವಿಚಾರ’ ಎಂದು ಮುನಿಸ್ವಾಮಿ ಹೇಳಿದರು. ಈಚೆಗೆ ಕನಕ ಜಯಂತಿ ವೇಳೆ ಸಿದ್ದರಾಮಯ್ಯ ಅವರನ್ನು ಹೊಗಳಿರುವ ಬಿಜೆಪಿ ಮುಖಂಡ ಮಾಜಿ ಸಚಿವ ವರ್ತೂರು ಪ್ರಕಾಶ್ ವಿಚಾರವಾಗಿ ಅವರು ಈ ರೀತಿ ಪ್ರತಿಕ್ರಿಯಿಸಿದರು.

ದೇಗುಲಗಳಿಗೆ ಜಿಲ್ಲಾಧಿಕಾರಿ ಜಾಗ ನೀಡಿದ್ದಾರೆಯೇ?

‘ಕೋಲಾರ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ 1600 ಎಕರೆ ಜಾಗ ಮಂಜೂರು ಮಾಡಿರುವುದಾಗಿ ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಹಿಂದೆ ಮಂಜೂರಾಗಿದ್ದನ್ನು ಈಗ ಹೇಳುತ್ತಿದ್ದಾರೆ. ಹೊಸದಾಗಿ ಏನಾದರೂ ಮಂಜೂರು ಮಾಡಿದ್ದಾರೆಯೇ? ಈ ಹಿಂದೆ ನಗರದ ರಸ್ತೆ ವಿಸ್ತರಣೆಗೆಂದು ಹಲವು ದೇಗುಲಗಳ ಜಾಗವನ್ನು ಪಡೆಯಲಾಗಿತ್ತು. ಅದಕ್ಕೇನಾದರೂ ಅವರು ಜಾಗ ನೀಡಿದ್ದಾರೆಯೇ’ ಎಂದು ಮುನಿಸ್ವಾಮಿ ಪ್ರಶ್ನಿಸಿದರು.

ನೂರಾರು ಕೋಟಿ ಹಗರಣ–ಆರೋಪ

‘ಕಾರ್ಮಿಕ ಇಲಾಖೆ ಆಯುಕ್ತರಾಗಿದ್ದಾಗ ಅಕ್ರಂ ಪಾಷಾ ಕೋವಿಡ್ ಸಮಯದಲ್ಲಿ ಕಾರ್ಮಿಕರಿಗೆ ಕಿಟ್ ವಿತರಣೆಯಲ್ಲಿ ನೂರಾರು ಕೋಟಿ ಹಗರಣ ಮಾಡಿದ್ದಾರೆ. ಕೋಲಾರಮ್ಮ ಕೆರೆಗೆ ಸಿಎಸ್ಆರ್ ನಿಧಿಯಲ್ಲಿ ₹ 3ರಿಂದ 4 ಕೋಟಿ ಹಗರಣ ನಡೆದಿದೆ. ಬೆಂಗಳೂರಿನಿಂದ ತಮಗೆ ಬೇಕಾದ ಗುತ್ತಿಗೆದಾರರನ್ನು ಕೋಲಾರಕ್ಕೆ ಕರೆಸಿ ಗುತ್ತಿಗೆ ನೀಡಿದ್ದಾರೆ. ಒಂದು ಸಮುದಾಯಕ್ಕೆ ಮಾತ್ರ ಜಿಲ್ಲಾಧಿಕಾರಿ’ ಎಂದು ಮುನಿಸ್ವಾಮಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.