ಮುಳಬಾಗಿಲು: ವೆಲ್ಡಿಂಗ್ ಕೆಲಸದ ಕಬ್ಬಿಣ ಸಲಕರಣೆಗಳನ್ನು ಎತ್ತಿ ಇಡುತ್ತಿದ್ದಾಗ ಆಕಸ್ಮಿಕವಾಗಿ 11 ಕೆವಿ ವಿದ್ಯುತ್ ತಂತಿ ತಗುಲಿ ಬಾಲಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ಮುಳಬಾಗಿಲು ನಗರದ ನೂಗಲಬಂಡೆಯ ಸೈಯದ್ ಷಾಹಿದ್( 16) ಮೃತ ಬಾಲಕ. ಈತ ಕೆಜಿಎಫ್ ರಸ್ತೆಯ ಹೈದರ್ ವಲ್ಲಿ ದರ್ಗಾ ಮುಂಭಾಗದ ಮೈದಾನದ ಬಳಿಯಲ್ಲಿ ಮನೆಯ ಕೆಲಸಕ್ಕೆ ಬಂದಿದ್ದ. ವೆಲ್ಡಿಂಗ್ ಮಾಡುವ ಸಲುವಾಗಿ ಕಬ್ಬಿಣದ ಸಲಕರಣೆಗಳನ್ನು ಎತ್ತಿ ಇಡುವಾಗ ಮೇಲೆಯೇ ಇದ್ದ 11 ಕೆವಿ ವಿದ್ಯುತ್ ತಂತಿ ತಗುಲಿದ್ದು ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.