ಕೋಲಾರ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲೇ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿ ಮಂಗಳವಾರ ‘ಸಿದ್ದರಾಮಯ್ಯ ಮನೆ ಚಲೋ’ ಹಮ್ಮಿಕೊಳ್ಳಲು ಕ್ಷೇತ್ರದ ಕುರುಬ ಸಮುದಾಯದ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ.

ನಗರದ ಕನಕಮಂದಿರದಲ್ಲಿ ಈ ವಿಚಾರವಾಗಿ ಸೋಮವಾರ ಸಭೆ ನಡೆಸಿದ ಮುಖಂಡರು, ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ತೆರಳಲು ಸಿದ್ಧರಾಗಬೇಕು ಎಂದು ಮನವಿ ಮಾಡಿದರು.

‘ಸಿದ್ದರಾಮಯ್ಯ ಮಾತು ಕೊಟ್ಟಂತೆ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲೇಬೇಕು. ಸುಳ್ಳು ಮಾಹಿತಿಗಳಿಗೆ, ತಪ್ಪು ಸಮೀಕ್ಷೆಗಳಿಗೆ ಬೆಲೆ ಕೊಡಬಾರದು. ಅವರನ್ನು ಕ್ಷೇತ್ರದ ಜನರು ಗೆಲ್ಲಿಸುವುದರಲ್ಲಿ ಯಾವುದೇ ಅನುಮಾನ ಬೇಡ. ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಸಭೆಯಲ್ಲಿ ಮುಖಂಡರು ನಿರ್ಣಯ ಕೈಗೊಂಡರು.

ನಗರಸಭೆ ಮಾಜಿ ಸದಸ್ಯರಾದ ಸಿ.ಸೋಮಶೇಖರ್, ಮಾಜಿ ಅಧ್ಯಕ್ಷ ವಿ.ಪ್ರಕಾಶ್, ಮುಖಂಡರಾದ ಮೋಹನ್ ಬಾಬು, ಶಿವಕುಮಾರ್, ಅಂಚೆ ಅಶ್ವಥ್, ನರೇಂದ್ರ ಬಾಬು, ಅನಂತ, ತ್ಯಾಗರಾಜ್ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.