ಕೆಜಿಎಫ್: ಬೆಮಲ್ ನಗರದ ಬಳಿ ನಿರ್ಮಾಣವಾಗಲಿರುವ ಟೌನ್ಶಿಪ್ ಜಾಗಕ್ಕೆ ಗುರುವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಪರಿಶೀಲನೆ ನಡೆಸಿದರು. ಜೊತೆಗೆ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬೆಮಲ್ ಅಧಿಕಾರಿಗಳ ವಸತಿಗೃಹ ಸಮುಚ್ಛಯದ ಹಿಂಭಾಗದಲ್ಲಿ 294 ಎಕರೆ ಪ್ರದೇಶದಲ್ಲಿ ಹೊಸದಾಗಿ ಟೌನ್ ಶಿಪ್ ನಿರ್ಮಿಸಲು ಸರ್ಕಾರವು ಜಾಗ ಮಂಜೂರು ಮಾಡಿತ್ತು. ಬೈರತಿ ಸುರೇಶ್ ಜಿಲ್ಲಾ ಉಸ್ತುವಾರಿ ಆದಾಗಿನಿಂದಲೂ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಹೀಗಾಗಿ, ಗುರುವಾರ ಕಂದಾಯ ಅಧಿಕಾರಿಗಳ ಜೊತೆಗೆ ಬಂದು ಸ್ಛಳ ಪರಿಶೀಲಿಸಿದ್ದಾರೆ.

ಟೌನ್ ಶಿಪ್ ಆಗುವ ಸಂದರ್ಭದಲ್ಲಿ ಸೂಕ್ತ ಮತ್ತು ವಿಶಾಲ ರಸ್ತೆ ಸೇರಿದಂತೆ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಅವುಗಳ ರಚನೆ ಹೇಗಿರಲಿವೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಟೌನ್ಶಿಪ್ನ ಸಂಪೂರ್ಣ ನಕ್ಷೆ ತಯಾರು ಮಾಡಿದ ನಂತರ ಮತ್ತೊಮ್ಮೆ ಸ್ಥಳ ಪರಿಶೀಲಿಸುವುದಾಗಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ತಹಶೀಲ್ದಾರ್ ಕೆ.ನಾಗವೇಣಿ, ಪೌರಾಯುಕ್ತ ಪವನ್ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.