ಮುಳಬಾಗಿಲು: ತಾಲ್ಲೂಕಿನ ಘಟ್ಟುಗುಡಿ ಹಾಗೂ ಎಂ.ಚಮಕಲಹಳ್ಳಿ ಮಾರ್ಗ ಮಧ್ಯದ ರಸ್ತೆಗೆ ಹೊಂದಿಕೊಂಡಿರುವ ರೈತರ ಜಮೀನಿನಲ್ಲಿ ವಿದ್ಯುತ್ ತಂತಿಗಳು ನೆಲಕ್ಕೆ ತಾಗಿದಂತೆ ನೇತಾಡುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿರುವಂತೆ ಇವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಯಾವುದೇ ಅಪಾಯ ಸಂಭವಿಸುವ ಮುನ್ನ ವಿದ್ಯುತ್ ತಂತಿಗಳನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿದ್ಯುತ್ ತಂತಿಗಳು ಗಿಡಗಂಟಿಗಳಿಗೆ ತಾಕುವಂತಿದ್ದು, ಯಾರಾದರೂ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ವಿದ್ಯುತ್ ತಂತಿಗಳು ವಾಲಿಕೊಂಡ ಜಮೀನು ಬೀಡು ಬಿದ್ದಿದ್ದು, ದನಕರು ಮತ್ತು ಕುರಿಗಳನ್ನು ಮೇಯಿಸಲು ಬಂದಾಗ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಕೂಡಲೇ ಬೆಸ್ಕಾಂ ಅಧಿಕಾರಿಗಳು ತಂತಿಗಳನ್ನು ಮೇಲಕ್ಕೆ ಕಟ್ಟಬೇಕು ಎಂದು ಕುರಿಗಾಹಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.