ಕೋಲಾರ: ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣ ಸಂಬಂಧ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯೆ ಅಂಜು ಬಾಲ ಶುಕ್ರವಾರ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.

ಮಲದ ಗುಂಡಿ ಪರಿಶೀಲಿಸಿದ ಅವರು 'ಪ್ರಾಂಶುಪಾಲರನ್ನೇ ಮಲದ ಗುಂಡಿಗೆ ಇಳಿಸಬೇಕಿತ್ತು' ಎಂದರು, ತಕ್ಷಣವೇ ಕೊಲೆ ಯತ್ನ ಕೇಸು ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.

'ಮಲದ ಗುಂಡಿಗೆ ಇಳಿಸಿದವರಿಗೆ ಸ್ವಲ್ಪವೂ ನಾಚಿಕೆ, ಮರ್ಯಾದೆ ಇಲ್ಲವೇ? ಇಂಥ ಗುಂಡಿಗೆ ಇಳಿದಾಗ ಮಕ್ಕಳು ಉಸಿರುಗಟ್ಟಿ ಸಾಯುವ ಸಾಧ್ಯತೆಗಳು ಇರುತ್ತವೆ' ಎಂದರು.

ಮೊದಲು ಅಧಿಕಾರಿಗಳಿಂದ ಮಾಹಿತಿ ಪಡೆದು ತರಾಟೆಗೆ ತೆಗೆದುಕೊಂಡರು. ನಂತರ ಮಕ್ಕಳನ್ನು ಕರೆದು ಸಮಸ್ಯೆ ಆಲಿಸಿದರು.

ಆಯೋಗದ ನಿರ್ದೇಶಕ ಸುನಿಲ್ ಬಾಬು, ಸದಸ್ಯರ ಆಪ್ತ ಕಾರ್ಯದರ್ಶಿ ಬಿ.ಕೆ.ಭೋಲಾ ಜೊತೆಗಿದ್ದರು. ಮಲದ ಗುಂಡಿಗೆ ಇಳಿಸಿದ್ದ ಸ್ಥಳವನ್ನು ವೀಕ್ಷಿಸಿದರು.

ಪ್ರಕರಣ ಬೆಳಕಿಗೆ ಬಂದು ಆರು ದಿನ ಕಳೆದಿದ್ದು, ಇನ್ನೂ ಶಾಲೆಗೆ ರಾಜ್ಯ, ರಾಷ್ಟ್ರ ಮಟ್ಟದ ಅಧಿಕಾರಿಗಳು, ವಿವಿಧ ಆಯೋಗಗಳ ಪ್ರತಿನಿಧಿಗಳು, ಸಚಿವರು, ಜನಪ್ರತಿನಿಧಿಗಳು ಹಾಗೂ ಹೋರಾಟಗಾರರು ಭೇಟಿ ನೀಡುತ್ತಲೇ ಇದ್ದಾರೆ.

ಮಕ್ಕಳ ಭದ್ರತಾ ಹಿತದೃಷ್ಟಿಯಿಂದ ಹೆಚ್ಚುವರಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.