ಕೊಪ್ಪಳ: ‘ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ ನೆಹರೂ ಅವರ ಭಾವಚಿತ್ರ ಬಿಟ್ಟು ಜನರ ದುಡ್ಡಲ್ಲಿ ಸುಳ್ಳು ಹೇಳುವ ಜಾಹೀರಾತು ನೀಡಿರುವುದರಿಂದ ಇತಿಹಾಸ ಬದಲಿಸಲು ಸಾಧ್ಯವಿಲ್ಲ‘ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸೋಮವಾರ ನಗರದ ಅಶೋಕ ವೃತ್ತದಲ್ಲಿರುವ ಅಮೃತ ಮಹೋತ್ಸವ ಫಲಕದ ಮುಂದೆ ಕಪ್ಪು ಪಟ್ಟಿ ಕಟ್ಟಿಕೊಂಡು, ನೆಹರೂ ಭಾವಚಿತ್ರ ಹಿಡಿದು ಸಾಂಕೇತಿಕ ಪ್ರತಿಭಟನೆ ನಡೆಸಿದರು.

‘ನೆಹರೂ ಅವರ ಮಾಹಿತಿ ಮತ್ತು ಭಾವಚಿತ್ರ ಕೈಬಿಟ್ಟ ರಣಹೇಡಿ ಸರ್ಕಾರ ಸಾವರ್ಕರ್ ಭಾವಚಿತ್ರವನ್ನು ಅಂಬೇಡ್ಕರ್ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗಿಂತ ಎತ್ತರದಲ್ಲಿ ಹಾಕಿ ಮೂವರಿಗೂ ಅವಮಾನ ಮಾಡಿದೆ. ಇತಿಹಾಸ ತಿರುಚುವಿಕೆ ಸರಿಯೇ’ ಎಂದು ಪ್ರಶ್ನಿಸಿತು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ, ನಗರಸಭೆ ಸದಸ್ಯ ಅಕ್ಬರ್ ಪಾಶಾ ಪಲ್ಟನ್, ಮುಖಂಡರಾದ ಮಂಜುನಾಥ ಜಿ. ಗೊಂಡಬಾಳ, ನಾಗರಾಜ ಚಲವಾದಿ, ಯಶೋಧಾ ಮರಡಿ, ಸವಿತಾ ಗೋರಂಟ್ಲಿ, ಸೌಭಾಗ್ಯಲಕ್ಷ್ಮೀ ಗೊರವರ್, ಅಂಬಿಕಾ ನಾಗರಾಳ, ಅನಿತಾ ಅಳ್ಳಣ್ಣವರ್, ಸಲೀಂ ಗೊಂಡಬಾಳ ಪಾಲ್ಗೊಂಡಿದ್ದರು.

ಧ್ವಜಾರೋಹಣ: ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಎಂ. ಇಟ್ಟಂಗಿ ಧ್ವಜಾರೋಹಣ ನೇರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.