ಗಂಗಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಗಂಗಾವತಿ ಮಾರ್ಗವಾಗಿ ಬಳ್ಳಾರಿಗೆ ತೆರಳುವಾಗ ಅವರ ಬೆಂಗಾವಲು ವಾಹನಗಳ ವಿರುದ್ಧ ಶಾಸಕ ಜನಾರ್ದನ ರೆಡ್ಡಿಯೇ ತಮ್ಮ ಕಾರು ಚಲಾಯಿಸಿಕೊಂಡು ಹೋಗಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸಿ.ಎಂ. ‘ಝೀರೊ ಟ್ರಾಫಿಕ್’ ನಡುವೆ ತೆರಳುವಾಗ ರೆಡ್ಡಿ ಅವರ ವಾಹನ ಸಿ.ಎಂ ಬೆಂಗಾವಲು ವಾಹನಕ್ಕೆ ವಿರುದ್ಧವಾಗಿ ತೆರಳಿತ್ತು. ಕೆಲವೇ ಸೆಕೆಂಡುಗಳಲ್ಲಿ ಮುಖ್ಯಮಂತ್ರಿ ಬೆಂಗಾವಲು ವಾಹನ ಎದುರಿಗೆ ಬಂದಿತ್ತು. ರೆಡ್ಡಿಗೆ ಸಂಬಂಧಿಸಿದ ಒಟ್ಟು ಮೂರು ಕಾರುಗಳು ಸಿ.ಎಂ. ಬೆಂಗಾವಲು ವಾಹನಗಳ ವಿರುದ್ಧವೇ ರಸ್ತೆ ವಿಭಜಕ ನುಗ್ಗಿಕೊಂಡು ಹೋಗಿವೆ. ಈ ಕುರಿತು ಗಂಗಾವತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಹಮೀದ್ ಹುಸೇನ್ ಖುದ್ದು ದೂರು ದಾಖಲಿಸಿದ್ದಾರೆ.

ಆದರೆ, ಪೊಲೀಸರು ಎಫ್ಐಆರ್ನಲ್ಲಿ ಕಾರುಗಳ ವಾಹನ ಚಾಲಕರು ಎಂದಷ್ಟೇ ನಮೂದಿಸಿದ್ದು, ಚಾಲಕರ ಹೆಸರು ಹಾಗೂ ವಿವರಗಳನ್ನು ತಿಳಿಸಿಲ್ಲ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಶಾಸಕ ರೆಡ್ಡಿಯೇ ಕಾರು ಚಲಾಯಿಸುತ್ತಿದ್ದ ವಿಡಿಯೊಗಳು ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.