ಅಳವಂಡಿ: ಅಯೋಧ್ಯೆದಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರ ನಿರ್ಮಾಣಕ್ಕೆ ಮೂರು ತಿಂಗಳ ಮಗುವಿನ ತೂಕದಷ್ಟು ನಾಣ್ಯಗಳನ್ನು ತೂಗಿಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು.

ಸಮೀಪದ ಭೈರಾಪುರ ಗ್ರಾಮದ ದೇವೇಂದ್ರಪ್ಪ ಮತ್ತು ಬುಡ್ಡಮ್ಮ ಪೂಜಾರ ಕುಟುಂಬ ಮೂರು ತಿಂಗಳದ 5 ಕೆಜಿ ಮಗುವಿನ ತೂಕದ ₹3 ಸಾವಿರ ಮೌಲ್ಯದ ₹5ರ ನಾಣ್ಯಗಳ ಮೂಲಕ ತೂಗಿ ನಿಧಿ ಸಮರ್ಪಣೆ ಮಾಡಿ ಭಕ್ತಿ ಮೆರೆದರು.

‘ಮಗುವಿನ ಶ್ರೇಯಸ್ಸು ಮತ್ತು ಭಗವಾನ್ ರಾಮನ ಆಶೀರ್ವಾದ ತಮ್ಮ ಕುಟುಂಬದ ಮೇಲೆ ಇರಲಿ ಎಂದು ಹರಕೆ ಹೊತ್ತು ನಿಧಿಯನ್ನು ತನುಮನದಿಂದ ಸಮರ್ಪಿಸಿದ್ದೇವೆ’ ಎಂದು ಕುಟುಂಬದ ಸದಸ್ಯರು ಹೇಳಿದರು. ಬಿಜೆಪಿಗ್ರಾಮೀಣ ಮಂಡಲದ ಉಪಾಧ್ಯಕ್ಷ ಬಸವರಡ್ಡಿ ರಡ್ಡೇರ, ಪಂಚಾಯಿತಿ ಸದಸ್ಯ ನಿಂಗಪ್ಪ ಮೇಟಿ, ವೀರಯ್ಯ ಸಿಂದೋಗಿ, ಚಂದ್ರು ಮೇಟಿ, ಸಂತೋಷ ಕೊಂಡಲಹಳ್ಳಿ, ಮಾರುತಿ ಮೇಟಿ, ಗವಿ ಹಾಗೂ ಮುದಕಯ್ಯ ಸಸಿಮಠ ಅವರು
ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.