ಕೊಪ್ಪಳ: ನಗರದಯುವ ಮಿತ್ರರು ಸೇರಿ ಸುಮಾರು 300 ಕೆಜಿಯ ಪಲಾವ್ ಹಾಗೂ ಸುಮಾರು 1,200 ಜಾಮೂನ್ನೀಡುವ ಮೂಲಕ ಕೊರೊನಾದಿಂದ ಸಂಕಷ್ಟ ಪಡುತ್ತಿದ್ದ ಜನರ ನೆರವಿಗೆ ಧಾವಿಸಿದ್ದಾರೆ.

ಸಾರ್ವಜನಿಕ ಆಸ್ಪತ್ರೆ, ನಿರ್ಗತಿಕರು, ರೈಲಿನಿಂದ ಬರುವ ಪ್ರಯಾಣಿಕರು, ಕೋವಿಡ್ ಆರೈಕೆ ಕೇಂದ್ರ, ಗವಿಮಠದ ಆಸ್ಪತ್ರೆಗೆ ದಾಸೋಹ ಸೇರಿದಂತೆ ಬಡವರಿಗೆ ಊಟ, ಸಿಹಿ ಹಂಚಲಾಯಿತು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ರುಚಿ ಮತ್ತು ಶುಚಿಯಾದ ಅಡುಗೆಯನ್ನು ತಯಾರಿಸಲಾಯಿತು. ವಿವಿಧ ಆಹಾರ ಪದಾರ್ಥಗಳ ರುಚಿ ನೋಡಿ ನಂತರ ಮಾತನಾಡಿದ ಅವರು, ‘ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಕಳೆದ ಒಂದು ತಿಂಗಳಿನಿಂದಲೂ ಲಾಕ್‌ಡೌನ್ ಮಾಡಿದೆ. ಅನೇಕರು ಊಟ, ಉಪಾಹಾರಕ್ಕೆ ತೊಂದರೆ ಪಡುವಂತೆ ಆಗಿದೆ. ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ಕೂಡಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಮಾನ ಮನಸ್ಕ ಮಿತ್ರರು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕೊಪ್ಪಳದ ಪ್ರಮುಖ ಸ್ಥಳಗಳಲ್ಲಿ ಬಡಜನರಿಗೆ, ದಾರಿಹೋಕರಿಗೆ, ಕೊರೊನಾವಾರಿಯರ್ಸ್‍ಗಳಿಗೆ ಊಟ ನೀಡಲಾಗುತ್ತಿದೆ. ಅಲ್ಲದೇ ಜೂನ್8 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಕ್ಷೇತ್ರದ 15 ಸಾವಿರಬಡ ಕುಟುಂಬಗಳಿಗೆ ರೇಷನ್ ಕಿಟ್ ಕೊಡುವುದಾಗಿ ಹೇಳಿದರು.

ಕೌಶಲ ಚೋಪ್ರಾ ನೇತೃತ್ವದಲ್ಲಿ ವಿನಯ್ ಅಗಡಿ, ಮಂಜುನಾಥ ಗೊಂಡಬಾಳ, ಸುಹಾನ್ ಶೆಟ್ಟಿ, ಮಹೇಂದರ್, ಚೇತನ್, ಮಂಜುನಾಥ ಮಟಸೊಪ್ಪಿ, ನವೀನ್, ಕಿಶೋರ್, ಸಂದೀಪ ನಾಯಕ್, ಮಂಜು ಪಾಟೀಲ್, ಅಜಯ ಅಗಡಿ ಸೇರಿ 3 ಸಾವಿರ ಊಟದ ಪ್ಯಾಕೇಟ್ ಮಾಡಿ ಗವಿಮಠದ ಆಸ್ಪತ್ರೆ ಮತ್ತು ಕೇರ್ ಸೆಂಟರ್‌ಗೆಕಳಿಸಿದರು.

ಮುಖಂಡರಾದ ಪ್ರಸನ್ನ ಗಡಾದ, ಶಿವಣ್ಣ ಪಾವಲಿಶೆಟ್ಟರ್, ಶರಣಪ್ಪ ಸಜ್ಜನ ಇದ್ದರು.

ಮಾವು ವಿತರಣೆ: ರೈತರ ಮೂಲಕ ಮಾವಿನ ಹಣ್ಣುಗಳನ್ನು ಖರೀದಿಸಿ ಗವಿಮಠದ ಕೋವಿಡ್ ಕೇರ್ ಆಸ್ಪತ್ರೆಗೆ ನೀಡಲಾಯಿತು. ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕಳಕನಗೌಡ ಪಾಟೀಲ್ ಕಲ್ಲೂರು ತಮ್ಮ ಸ್ವಂತ ವೆಚ್ಚದಲ್ಲಿ ಖರೀದಿಸಿ
ನೀಡಿದ್ದಾರೆ.

ಬಸವ ಜಯಂತಿಯಂದೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಕಳಕನಗೌಡರ ಅಭಿಮಾನಿ ಬಳಗದ ವತಿಯಿಂದ ರೈತರ ಹಣ್ಣುಗಳನ್ನು ನಿತ್ಯ ಖರೀದಿಸಿ ಕೋವಿಡ್ ಆಸ್ಪತ್ರೆ, ಆರೈಕೆ ಕೇಂದ್ರಗಳಿಗೆ ಹಂಚುವ ಕಾರ್ಯವನ್ನು 15 ದಿನಗಳಿಂದ ಮಾಡುತ್ತಾ ಬಂದಿದ್ದಾರೆ.

ರೈತರ ಬಳಿ ನೈಸರ್ಗಿಕವಾಗಿ ಮಾಗಿಸಿದ, ಗಿಡದಿಂದ ಉದುರಿದ ಮಾವು, ಉತ್ತಮ ಬಾಳೆ ಹಾಗೂ ಪೈನಾಪಲ್,ಸಂತ್ರಾ ಹಣ್ಣುಗಳು ಇದ್ದರೆ ಅವರಿಗೆ ಕರೆ ಮಾಡಿ ಮಾರಾಟ ಮಾಡಬಹುದು. ರೈತರು ಲಾಕ್‍ಡೌನ್ ಪರಿಣಾಮವಾಗಿ ತಾವು ಬೆಳೆದ ಹಣ್ಣುಗಳಿಗೆ ಮಾರುಕಟ್ಟೆಯೂ ಇಲ್ಲ, ಬೆಲೆಯೂ ಇಲ್ಲವೆಂದು ತೊಳಲಾಡುತ್ತಿರುವ ಸಂದರ್ಭದಲ್ಲಿನೇರವಾಗಿ ರೈತರ ತೋಟಗಳಿಗೆ ತೆರಳಿ ಹಣ್ಣು ಖರೀದಿಸಿ ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ. ಹಣ್ಣುಗಳನ್ನು ಮಾರಾಟ ಮಾಡಲು ಕಳಕನಗೌಡ ಪಾಟೀಲ್, ಮೊ-9448219208 ಅವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.