ಗಂಗಾವತಿ: ಇಲ್ಲಿನ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಬಹುಮತಕ್ಕೆ ಬೇಕಾಗುವಷ್ಟು ಬಲವಿದ್ದರೂ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಅವರು ವಿಧಾನಸಭಾ ಚುನಾವಣಾ ಸಮಯದಲ್ಲಿ ತಮಗೆ ನೆರವಾಗಿದ್ದ ಕಾಂಗ್ರೆಸ್ ಸದಸ್ಯರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ.

35 ಸದಸ್ಯರ ನಗರಸಭೆಯಲ್ಲಿ ಅಧಿಕಾರ ಹಿಡಿಯಲು 18 ಸದಸ್ಯರ ಬಲ ಅಗತ್ಯವಾಗಿತ್ತು. 14 ಬಿಜೆಪಿ, 2 ಜೆಡಿಎಸ್, 2 ಪಕ್ಷೇತರ ಹಾಗೂ ಶಾಸಕರ ಒಂದು ಮತ ಸೇರಿ ಬಿಜೆಪಿ ಬಳಿ 19 ಮತಗಳಿದ್ದವು. ಆದರೂ ಬಿಜೆಪಿ ಕಾಂಗ್ರೆಸ್ ಸದಸ್ಯರ ಮೊರೆ ಹೋಯಿತು.

ಕಾಂಗ್ರೆಸ್‌ನಿಂದ ಸದಸ್ಯರಾಗಿರುವ ಮೌಲಾಸಾಬ್ ದಾದೆಸಾಬ್ (16ನೇ ವಾರ್ಡ್) ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷೆಯಾಗಿ ಪಾರ್ವತಮ್ಮ ದುರಗೇಶ ದೊಡ್ಡಮನಿ (13ನೇ ವಾರ್ಡ್) ಆಯ್ಕೆಯಾದರು. ಇವರಿಬ್ಬರಿಗೂ ತಲಾ 28 ಮತಗಳು ಬಂದವು. ಇವರು ವಿಧಾನಸಭಾ ಚುನಾವಣೆಯಲ್ಲಿ ರೆಡ್ಡಿ ಸ್ಪರ್ಧಿಸಿದ್ದ ಕೆಆರ್‌ಪಿಪಿ ಪಕ್ಷವನ್ನು ಬೆಂಬಲಿಸಿದ್ದರು. ಜನಾರ್ದನ ರೆಡ್ಡಿ ಅವರು ಇದೀಗ ಅವರಿಗೆ ಋಣ ಸಂದಾಯ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ಖಾಸೀಂಸಾಬ್ ಗದ್ವಾಲ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಹುಲಿಗೆಮ್ಮ ಕಿರಿಕಿರಿ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇವರಿಗೆ ತಲಾ ಎಂಟು ಮತಗಳು ಮಾತ್ರ ಲಭಿಸಿದವು.

ಈ ಕುರಿತು ಪ್ರತಿಕ್ರಿಯಿಸಿದ ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ, ‘ಹೇಗಾದರೂ ಮಾಡಿ ನಗರಸಭೆಯಲ್ಲಿ ಅಧಿಕಾರ ಹಿಡಿಯಬೇಕಾಗಿತ್ತು. ಜಾತಿ, ಧರ್ಮ, ಮತ ಮೀರಿ ನಗರಸಭೆ ಸದಸ್ಯರೆಲ್ಲರೂ ಪಕ್ಷಾತೀತವಾಗಿ ನಮಗೆ ಬೆಂಬಲ ನೀಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.