ಕೊಪ್ಪಳ: ಜಿಲ್ಲಾ ರಜತ ಮಹೋತ್ಸವ ಅಂಗವಾಗಿ ನಗರದಲ್ಲಿ ಶುಕ್ರವಾರ ನಡೆದ ಅದ್ದೂರಿ ಮೆರವಣಿಗೆಯಲ್ಲಿ ಕಲಾತಂಡಗಳ ಸಾಂಸ್ಕೃತಿಕ ಸೊಬಗು ಅನಾವರಣಗೊಂಡಿತು.

ತಾಲ್ಲೂಕು ಕ್ರೀಡಾಂಗಣದಿಂದ ಆರಂಭವಾದ ಮೆರವಣಿಗೆ ಸಾಲಾರ್ಜಂಗ್ ರಸ್ತೆ, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಬನ್ನಿಕಟ್ಟಿವರೆಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಕರಡಿ ಮಜಲು, ಡೊಳ್ಳುಕುಣಿತ, ಮೋಜಿನ ಗೊಂಬೆ, ಹಗಲುವೇಷ, ಹಲಗೆ ವಾದನ, ನಂದಿಧ್ವಜ, ಕಣಿ ಹಲಗಿ ವಾದನ, ಕೋಲಾಟ ಮತ್ತು ವೀರಗಾಸೆ ನೃತ್ಯಗಳು ಗಮನ ಸೆಳೆದವು.

ಸಂಸದ ಸಂಗಣ್ಣ ಕರಡಿ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆ ಸೇರಿದಂತೆ ಅನೇಕರು ಮೆರವಣಿಗೆಗೆ ಚಾಲನೆ ನೀಡಿದರು. ಜನಪ್ರತಿನಿಧಿಗಳು ಡೊಳ್ಳು ಬಾರಿಸಿದರು.

ಪುರವಂತರು, ಹಗಲು ವೇಷಗಾರರು, ಜಗ್ಗಲಗೆಗಳ ಸಾಲು, ಮರಗಾಲು ಮಾನವರು, ನಿಲುವಿನ ಮರಗಾಲು ಕಲಾವಿದರು, ಡಾಲಾಪಟ ಕಲಾವಿದರು ಮತ್ತು ಕಹಳೆ ವಾದಕರು ಸಾಂಸ್ಕೃತಿಕ ವೈಭವ ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ಕಲಾವಿದರು ಹುಮ್ಮಸ್ಸಿನಲ್ಲಿ ಕಲಾವೈಭವ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.