ಯಲಬುರ್ಗಾ: ಮಹಾತ್ಮರ ಜಯಂತಿ ಆಚರಣೆಯ ಕಾರ್ಯಕ್ರಮಗಳಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾವಹಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಬಸವ, ಭಗೀರಥ, ಶಂಕರಚಾರ್ಯ ಹಾಗೂ ಹೇಮರೆಡ್ಡಿ ಜಯಂತಿಗಳ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಬಹುತೇಕ ಜಯಂತಿ ಆಚರಿಸುವ ವೇಳೆ ಕೆಲವು ಅಧಿಕಾರಿಗಳು ಗೈರಾಗುವ ಕುರಿತು ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿವೆ. ಅಧಿಕಾರಿಗಳು ಗೈರುತನ ಅವರ ಬೇಜವಾಬ್ದಾರಿ ತನದ ನಡೆ ಆಗಬಲ್ಲದು. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣ ಜಯಂತಿಗಳನ್ನು ಸರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಇನ್ನು ಮುಂದೆ ಕೋವಿಡ್ ನಿಯಮ ಪಾಲಿಸಿ ಅದ್ದೂರಿಯಾಗಿ ಜಯಂತಿಗಳನ್ನು ಆಚರಿಸಲಾಗುದು ಎಂದು ಭರವಸೆ ನೀಡಿದರು.

ಬಸವ ಜಯಂತಿಯನ್ನು ಮೊಗ್ಗಿಬಸವೇಶ್ವರ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಭಗೀರಥ ಜಯಂತಿಯನ್ನು ಪಟ್ಟಣದ ಬಯಲು ರಂಗಮಂದಿರದಲ್ಲಿ, ಹೇಮರಡ್ಡಿ ಜಯಂತಿಯನ್ನು ಕಚೇರಿಯಲ್ಲಿ ಆಚರಿಸಲಾಗುತ್ತದೆ. ರಡ್ಡಿ ಸಮಾಜದವರು ರಾಜೂರು ಗ್ರಾಮದಲ್ಲಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಪ.ಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಉಪ ತಹಶೀಲ್ದಾರ್ ನಾಗಪ್ಪ ಸಜ್ಜನ, ಪ.ಪಂ ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ, ವರ್ತಕ ಸಂಗಣ್ಣ ಟೆಂಗಿನಕಾಯಿ, ಸಂಗಪ್ಪ ವಕ್ಕಳದ, ಬಸವರಾಜ ಅಧಿಕಾರಿ, ದಾನನಗೌಡ ತೊಂಡಿಹಾಳ ಮಾತನಾಡಿದರು.

ಮುಖಂಡರಾದ ವಿಜಯಕುಮಾರ ಕರಂಡಿ, ರಾಜಶೇಖರ ಶ್ಯಾಗೋಟಿ, ಡಾ.ಶಿವನಗೌಡ ದಾನರೆಡ್ಡಿ, ಅಮರಪ್ಪ ಕಲಬುರಗಿ, ರವಿ ಗುರಡ್ಡಿ, ಬಸವರಾಜ ಕಜ್ಜಿ, ಸಂಗಪ್ಪ ಕರಂಡಿ, ಫಕ್ಕೀರಪ್ಪ ಉಪ್ಪಾರ, ಕೃಷಿ ಅಧಿಕಾರಿ ಪ್ರಾಣೇಶ ಹಾದಿಮನಿ, ಬಿಸಿಎಂ ಅಧಿಕಾರಿ ಎಸ್.ವಿ. ಭಜಂತ್ರಿ, ಸಮಾಜ ಕಲ್ಯಾಣಾಧಿಕಾರಿ ವಿ.ಕೆ.ಬಡಿಗೇರ, ಅಕ್ಷರ ದಾಸೋಹ ಅಧಿಕಾರಿ ಎಫ್.ಎಂ.ಕಳ್ಳಿ, ಸಿಬ್ಬಂದಿ ಶ್ರೀಧರಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.