ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾವರಗೇರಾ | ಮದರಸಾ ಮಕ್ಕಳಿಗೆ ಸಾಮಗ್ರಿ ವಿತರಣೆ

Published : 15 ಸೆಪ್ಟೆಂಬರ್ 2024, 14:39 IST
Last Updated : 15 ಸೆಪ್ಟೆಂಬರ್ 2024, 14:39 IST
ಫಾಲೋ ಮಾಡಿ
Comments

ತಾವರಗೇರಾ: ‘ಸಮಾಜದಲ್ಲಿ ಮಾನವ ಮೌಲ್ಯಗಳನ್ನು ಕಾಪಾಡುವುದು ಅತಿ ಮುಖ್ಯವಾಗಿದೆ. ಆದ್ದರಿಂದ ಮದರಸಾ ಮಕ್ಕಳಿಗೆ ಸಮಾಜದ ಸಹಕಾರದಿಂದ ವಿಶೇಷ ಕಾರ್ಯಕ್ರಮ ಆಯೋಜಿಸಿ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ಸ್ಥಳೀಯ ಅಂಜುಮಾನ ನೌಜನ್ ಕಮಿಟಿ ಅಧ್ಯಕ್ಷ ಫಯಾಜ್ ಬನ್ನು ಹೇಳಿದರು.

ಪಟ್ಟಣದಲ್ಲಿ ಮುಸ್ಲಿಂ ಸಮಾಜದ ಎಚ್‌ಕೆಜಿಎನ್ ಕಮಿಟಿ ವತಿಯಿಂದ ಭಾನುವಾರ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಅರಬ್ಬಿ ಮದರಸಾ ಮಕ್ಕಳಿಗೆ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಂತರ ಎಚ್‌ಕೆಜಿಎನ್ ಅಧ್ಯಕ್ಷ ನವಾಬ್ ಮೆಹಬೂಬ್ ಜಹಗೀರದಾರ ಮಾತನಾಡಿ, ‘ನಮ್ಮ ಕಮಿಟಿ ವತಿಯಿಂದ ಸಾಮಾಜಿಕ ಕಾರ್ಯಗಳನ್ನು ನಡೆಸಲಾಗುವದು. ಅದರಂತೆ ಇಂದೂ ಸಹ ಅರಬ್ಬಿ ಮದರಸಾ ಮಕ್ಕಳಿಗೆ ಬ್ಯಾಗ್ , ಟೋಪಿ ವಿತರಣೆ ಮಾಡಲಾಗಿದೆ. ಸಮಾಜದಲ್ಲಿ ನಾವೆಲ್ಲ ವಿವಿಧ ಸಮಾಜಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು’ ಎಂದರು.

ಕಮಿಟಿ ಕಾರ್ಯದರ್ಶಿ ಮಹಮ್ಮದ್ ಹುಸೇನ್, ಇನಾಮ್ ಜಾಹೀದ್ ಹುಸೇನ್, ವಕ್ಫ್‌ಬೋರ್ಡ್‌ ಉಪಾಧ್ಯಕ್ಷ ಸೈಯದ್ ಖಾಜಾರಜಾ, ಸೈಯದ್ ನವೀದ್, ಶ್ಯಾಮೀದಸಾಬ ನಾಡಗೌಡ, ಮಹಮ್ಮದ್ ಹುಸೇನ್ ಮತ್ತು ಸಮಾಜದ ಪ್ರಮುಖರು, ಕಮಿಟಿ ಸದಸ್ಯರು ಮದರಸಾ ಮಕ್ಕಳು ಹಾಜರಿದ್ದರು.

ತಾವರಗೇರಾ ಪಟ್ಟಣದಲ್ಲಿ ಭಾನುವಾರ ಹೆಚ್ ಕೆ ಜಿ ಎನ್ ಕಮಿಟಿ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮ ದಿನ ಪ್ರಯುಕ್ತ ಮದರಸಾ ಮಕ್ಕಳಿಗೆ ಬ್ಯಾಗ್ ಟೋಪಿ ವಿತರಣೆ ಕಾರ್ಯಕ್ರಮ ನಡೆಯಿತು.
ತಾವರಗೇರಾ ಪಟ್ಟಣದಲ್ಲಿ ಭಾನುವಾರ ಹೆಚ್ ಕೆ ಜಿ ಎನ್ ಕಮಿಟಿ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮ ದಿನ ಪ್ರಯುಕ್ತ ಮದರಸಾ ಮಕ್ಕಳಿಗೆ ಬ್ಯಾಗ್ ಟೋಪಿ ವಿತರಣೆ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT