ಆಡಳಿತ ಮಂಡಳಿ ಇಲ್ಲದಿದ್ದರೂ ಸಮಸ್ಯೆಯಾಗಿಲ್ಲ. ನೀರು ನೈರ್ಮಲ್ಯ ಬೀದಿದೀಪ ನಿರ್ವಹಣೆ ಉತ್ತಮವಾಗಿದೆ. ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿ ಸಮಸ್ಯೆ ಅರಿಯುತ್ತಿದ್ದೇವೆ.
ಡಿ.ಎನ್.ಧರಣೇಂದ್ರಕುಮಾರ, ಮುಖ್ಯಾಧಿಕಾರಿ
ಉತಾರ ಪಡೆಯಬೇಕೆಂದರೆ ಏಜೆಂಟರ ಮೂಲಕವೇ ಹೋಗಬೇಕು. ಆರ್‌ಒ ಪ್ಲಾಂಟ್‌ಗಳಲ್ಲಿ ಸ್ವಚ್ಛತೆ ಇಲ್ಲ. ರಸ್ತೆಗಳು ದೂಳುಮಯವಾಗಿದ್ದು ಜನ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದು ಅಧಿಕಾರಿಗಳು ಗಮನಹರಿಸಬೇಕು
ಡಾ.ಭೀಮನಗೌಡ ಜಾಲಿಹಾಳ, ವೈದ್ಯ
ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ ಕೆಲ ಪ್ರಭಾವಿಗಳು ಕಚೇರಿಯಲ್ಲೇ ಠಿಕಾಣಿ ಹೂಡಿರುತ್ತಾರೆ. ಯಾವುದೇ ಕೆಲಸಕ್ಕೆ ಮಧ್ಯವರ್ತಿಗಳ ಮೂಲಕವೇ ಮಾಡಿಸಿಕೊಳ್ಳುವ ಅನಿವಾರ್ಯತೆ ಇದೆ
ವಜೀರಅಲಿ ಗೋನಾಳ, ಭಗತ್‌ಸಿಂಗ್ ಕ್ರೀಡಾ ಸಂಸ್ಥೆ, ಅಧ್ಯಕ್ಷ
ಉದ್ಯಾನ ಜಾಗಗಳು ಮುಳ್ಳುಕಂಟಿಗಳ ಕಾಡಿನಂತಾಗಿವೆ ಒಬ್ಬ ಸದಸ್ಯರಿಗೂ ಉದ್ಯಾನ ಅಭಿವೃದ್ಧಿಯ ಕಳಕಳಿ ಇಲ್ಲ.
ಶಂಕರ ಚಟ್ಟೇರ, ನಿವಾಸಿ
ಕುಷ್ಟಗಿ ನಾಲ್ಕನೇ ವಾರ್ಡ್‌ನಲ್ಲಿರುವ ಪುರಸಭೆ ಉದ್ಯಾನದಲ್ಲಿ ಮುಳ್ಳುಕಂಟಿ ಬೆಳೆದಿದೆ
ನಿರ್ಮಾಣಗೊಂಡ ವರ್ಷದೊಳಗೇ ಕುಷ್ಟಗಿ ಕುರುಬನಾಳ ಸಂಪರ್ಕ ರಸ್ತೆಯಲ್ಲಿ ಗುಂಡಿಗಳು ಕಂಡುಬಂದಿವೆ