ಕೊಪ್ಪಳ: ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಬುಧವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಹೆಸರು ಓದಿ ಪೇಚಿಗೆ ಸಿಲುಕಿದರು.

ಈ ಬಾರಿ ಜಿಲ್ಲೆಯ ಮೂವರಿಗೆ ಪ್ರಶಸ್ತಿ ಲಭಿಸಿದೆ ಎಂದಷ್ಟೇ ಹೇಳಿದರೂ; ಯಾರ ಹೆಸರನ್ನೂ ಪ್ರಸ್ತಾಪಿಸಲಿಲ್ಲ.

ಜಿಲ್ಲೆಯ ತೊಗಲು ಗೊಂಬೆ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ, ಸರ್ಕಾರಿ ಶಾಲೆಗೆ ಎರಡು ಎಕರೆ ಭೂಮಿ ದಾನ ನೀಡಿದ ಹುಚ್ಚಮ್ಮ ಬಸಪ್ಪ ಚೌದ್ರಿ ಹಾಗೂ ಹಗಲುವೇಷ ಕಲಾವಿದ ಸಿದ್ದಾಪುರದ ವಿಭೂತಿ ಗುಂಡಪ್ಪ ಅವರಿಗೆ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಪ್ರಶಸ್ತಿ ನೀಡಿದರೂ ಈ ವರ್ಷ ಪ್ರಶಸ್ತಿ ಪಡೆದವರ ಹೆಸರು ಸಚಿವರ ಭಾಷಣದಲ್ಲಿ ಸೇರಿಸದೇ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ.

ಬದಲಿಗೆ ಕಳೆದ ವರ್ಷ ಪ್ರಶಸ್ತಿ ಪಡೆದ ಶಂಕ್ರಪ್ಪ ಹೊರಪೇಟಿ ಹಾಗೂ ಸಣ್ಣ ರಂಗಪ್ಪ ಚಿತ್ರಗಾರ ಹೆಸರು ಹಾಕಿದ್ದಾರೆ. ಅವರ ಹೆಸರುಗಳನ್ನೇ ಸಚಿವರು ಓದಿದರು.

ತಕ್ಷಣ ಎಚ್ಚೆತ್ತುಕೊಂಡ ಅವರು ಈ ವರ್ಷ ಮೂವರು ಗಣ್ಯರಿಗೆ ರಾಜ್ಯೋತ್ಸವ ನೀಡಲಾಗಿದೆ ಎಂದು ತಪ್ಪು ಸರಿಪಡಿಸಿ ಭಾಷಣ ಮುಗಿಸಿದರು.
.ಕೊಪ್ಪಳ | ಕರ್ನಾಟಕ ಸುವರ್ಣ ಸಂಭ್ರಮ, ವರ್ಷಪೂರ್ತಿ ಕಾರ್ಯಕ್ರಮ: ಸಚಿವ ತಂಗಡಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.