ಅಳವಂಡಿ (ಕೊಪ್ಪಳ ಜಿಲ್ಲೆ): ಜಿಲ್ಲೆಯ ಅಳವಂಡಿಯ ಮುಸ್ಲಿಂ ಕುಟುಂಬವೊಂದು ಹಿಂದೂ ಸಂಸ್ಕೃತಿಯ ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿತು.

ನಜುರುದ್ದೀನ್ ಬಿಸರಳ್ಳಿಹಾಗೂ ರಜಿಯಾಬೇಗಂ ದಂಪತಿ ಮೂರು ವರ್ಷಗಳಿಂದ ಈ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ಈ ಸಲವೂ ಎಲ್ಲ ಹಿಂದೂ ಧಾರ್ಮಿಕ ಸಂಪ್ರದಾಯ ಪಾಲಿಸಿ ವಿಶೇಷ ಪೂಜೆ ಸಲ್ಲಿಸಿದರು. ಹಬ್ಬದ ಸಲುವಾಗಿ ಮನೆಗೆ ದೀಪಾಲಂಕಾರ ಮಾಡಿದ್ದರು. ಹೋಳಿಗೆ ನೈವೇದ್ಯ ಮಾಡಿ ಹಾಗೂ ವಿವಿಧ ತರಹದ ಹಣ್ಣುಗಳು ಸಮರ್ಪಿಸಿ ಭಾವೈಕ್ಯ ಮೆರೆದರು.

ಮನೆಗೆ ವಿದ್ಯುತ್ ದೀಪ ಹಾಗೂ ತಳಿರುತೋರಣ ಕಟ್ಟಿ ಸಿಂಗರಿಸಲಾಗಿತ್ತು. ನಜುರುದ್ದೀನ್ ಬಿಸರಳ್ಳಿ ಹಬ್ಬದ ಪ್ರಯುಕ್ತ ಎಲ್ಲಾ ಧರ್ಮಗಳ ತಮ್ಮ ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಹಬ್ಬದ ಊಟ ಉಣಬಡಿಸಿದರು.

‘ಮೂರು ವರ್ಷಗಳ ಹಿಂದೆವರಮಹಾಲಕ್ಷ್ಮಿ ಹಬ್ಬದ ದಿನದಂದೇ ಹೊಸ ಮನೆಯ ಪ್ರವೇಶ ಮಾಡಿದ್ದೆವು. ಆಗಲೂ ಈ ಹಬ್ಬ ಆಚರಿಸಿದ್ದೆವು. ಹಿಂದೂ–ಮುಸ್ಲಿಂ ಎರಡೂ ದೇವರನ್ನು ಪೂಜಿಸುತ್ತೇವೆ. ಇದರಿಂದ ನಮ್ಮ ಜೀವನದಲ್ಲಿ ಬಹಳಷ್ಟು ಒಳ್ಳೆಯದನ್ನೇ ಕಂಡಿದ್ದೇವೆ’ ಎಂದು ನಜುರುದ್ದೀನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.