ವಡಗೇರಾ: ಹತ್ತಿ ಬಿಡಿಸಲು ಆಂಧ್ರ, ತೆಲಂಗಾಣದ ಕಾರ್ಮಿಕರ ಮೊರೆ
ವಡಗೇರಾ ತಾಲ್ಲೂಕಿನಲ್ಲಿ ಕೂಲಿ ಕಾರ್ಮಿಕರ ಕೊರತೆ ಹಿನ್ನೆಲೆ
ವಾಟ್ಕರ್ ನಾಮದೇವ
Published : 19 ನವೆಂಬರ್ 2024, 5:22 IST
Last Updated : 19 ನವೆಂಬರ್ 2024, 5:22 IST
ಫಾಲೋ ಮಾಡಿ
Comments
ವಡಗೇರಾ ಜಮೀನಿನಲ್ಲಿ ಬಿಡಿಸಿದ ಹತ್ತಿಯನ್ನು ಚೀಲಗಳಲ್ಲಿ ಪಾಲಕರು ತುಂಬುತ್ತಿದ್ದರೆ ಮಕ್ಕಳು ಹತ್ತಿಯ ರಾಶಿಯಲ್ಲಿ ಆಟವಾಡುತ್ತಿರುವುದು
ನಮ್ಮ ಭಾಗದಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಹಾಗೂ ಮೋಡ ಕವಿದ ವಾತಾವರಣ ಇರುವುದರಿಂದ ಹತ್ತಿ ಹಾಳಾಗಬಹುದು ಎಂಬ ಭಯದಿಂದ ದೂರದ ಸ್ಥಳಗಳಿಂದ ಕೂಲಿ ಕಾರ್ಮಿಕರನ್ನು ಕರೆದು ತಂದು ಹತ್ತಿ ಬಿಡಿಸಿಕೊಳ್ಳುವುದು ಅನಿವಾರ್ಯವಾಗಿದೆ.
-ಶರಣಪ್ಪ ಜಡಿ ಚಂದಾಸಾ ಹುಲಿ ಶರಣು ಇಟಗಿ ರೈತರು
ಮಂತ್ರಾಲಯ ಭಾಗದಲ್ಲಿ ನಮಗೆ ಸದ್ಯ ಯಾವುದೇ ಕೆಲಸವಿಲ್ಲ. ಅದಕ್ಕಾಗಿ ಹತ್ತಿ ಬಿಡಿಸಲು 30 ಕುಟುಂಬಗಳು ಕುಟುಂಬ ಸಮೇತ ವಡಗೇರಾ ಪ್ರದೇಶದತ್ತ ಬಂದಿದ್ದೇವೆ. ನಾವು 12 ಗಂಟೆ ಕೆಲಸ ಮಾಡಿದರೆ 1 ಕ್ವಿಂಟಲ್ ಹತ್ತಿ ಬಿಡಿಸುತ್ತೇವೆ.