ಮದ್ದೂರು: ಸಮಯಕ್ಕೆ ಸರಿಯಾಗಿ ಮಳೆಬಾರದೆ ಹಾಗೂ ಕೆಆರ್ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸದ್ದರಿಂದ ಸಮೀಪದ ಚನ್ನಸಂದ್ರದಲ್ಲಿ ಒಣಗಿದ 1.15 ಎಕರೆ ಕಬ್ಬನ್ನು ರೈತ ಟ್ರ್ಯಾಕ್ಟರ್ ರೂಟರ್ ಬಳಸಿ ಹರಗಿ, ನೆಲಸಮ ಮಾಡಿದ್ದಾರೆ.

ರೈತ ಲಕ್ಷ್ಮಣ್ ಅವರು ಸುಮಾರು ₹ 1 ಲಕ್ಷ ಖರ್ಚು ಮಾಡಿ ಏಳು ತಿಂಗಳಿಂದ ಕಬ್ಬು ಬೆಳೆಸಿದ್ದರು. ಆದರೆ, ನೀರಿನ ಕೊರತೆಯಿಂದಾಗಿ ಕಬ್ಬು ಸಂಪೂರ್ಣ ಒಣಗಿತ್ತು. ಇದರಿಂದ ಬೇಸರಗೊಂಡ ಲಕ್ಷ್ಮಣ್ ಹರಗಿ ಜಮೀನನ್ನು ಸಮತಟ್ಟು ಮಾಡಿದರು.

‘ಸರ್ಕಾರ ಕೆಆರ್ಎಸ್ನಿಂದ ವಿಶ್ವೇಶ್ವರಯ್ಯ ನಾಲೆಯ ಮೂಲಕ ಒಂದು ಕಟ್ಟು ನೀರನ್ನು ಹರಿಸಿದ್ದರೆ ನನ್ನಂತ ಸಾವಿರಾರು ರೈತರು ಕಷ್ಟಪಟ್ಟು ಬೆಳೆದಿದ್ದ ಕಬ್ಬಿನ ಬೆಳೆ ಉಳಿಯುತಿತ್ತು. ರಾಜ್ಯ ಸರ್ಕಾರ ತಮಿಳುನಾಡು ಸರ್ಕಾರವನ್ನು ಓಲೈಸಲು ರಾಜ್ಯದ ರೈತರ ಹಿತ ಮರೆತಿದ್ದರಿಂದ ಈ ದುರ್ಗತಿ ಬಂದಿದೆ’ ಎಂದು ರೈತ ಲಕ್ಷ್ಮಣ್ ಬೇಸರ ವ್ಯಕ್ತಪಡಿಸಿದರು.

‘ಸರ್ಕಾರ ಇದೇ ರೀತಿ ರೈತರ ಹಿತ ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ರೈತರು ತಕ್ಕ ಪಾಠ ಕಲಿಸಲಿದ್ದಾರೆ. ರೈತರು ಕೃಷಿಯಿಂದ ವಿಮುಖವಾಗಲಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.