ಮೇಲುಕೋಟೆ: ಸಂತಾನಭಾಗ್ಯ ಕರುಣಿಸುವ ಉತ್ಸವವೆಂದೇ ಪ್ರಖ್ಯಾತವಾಗಿರುವ ತೊಟ್ಟಿಲು ಮಡುಜಾತ್ರೆ ‘ರಾಜಮುಡಿ ಅಷ್ಟತೀರ್ಥೋತ್ಸವ’ ನ.11 ರಂದು ಕ್ಷೇತ್ರದಲ್ಲಿ ನಡೆಯಲಿದೆ.

ಬೆಳಿಗ್ಗೆ 8ಕ್ಕೆ ಕಲ್ಯಾಣಿಯಲ್ಲಿ ಅಷ್ತೀರ್ಥೋತ್ಸವ ಆರಂಭವಾಗಿ ರಾತ್ರಿ 9ಕ್ಕೆ ಮುಕ್ತಾಯವಾಗಲಿದೆ. ಈ ನಡುವೆ ಗಿರಿಶಿಖರಗಳ ಮಧ್ಯೆಯಿರುವ ಎಂಟು ತೀರ್ಥಗಳಲ್ಲಿ ಸ್ವಾಮಿಯ ಪಾದುಕೆಗೆ ಅಭಿಷೇಕ ನೆರವೇರಿಸುವುದು ಈ ಜಾತ್ರೆ ವಿಶೇಷತೆ.

ಇಲ್ಲಿನ ಕಣಿವ ಬಳಿಯಿರುವ ತೊಟ್ಟಿಲಮಡು ಬಳಿ ಸಂಜೆ ಜಾತ್ರೆ ಸೇರುತ್ತದೆ. ಅಷ್ಟತೀರ್ಥೋತ್ಸವದಲ್ಲಿ ಸಂತಾನಭಾಗ್ಯ ಅಪೇಕ್ಷಿಸಿದ ದಂಪತಿ, ವಿವಾಹ ಅಪೇಕ್ಷಿತ ಯುವಕರು, ಯುವತಿಯರು ಹರಕೆಯೊಂದಿಗೆ ಭಾಗಿಯಾದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ.

ಆದಕಾರಣ, ನೂರಾರು ಸಂಖ್ಯೆಯ ಭಕ್ತರು ಕಲ್ಯಾಣಿಯಲ್ಲಿ ಪ್ರಥಮ ತೀರ್ಥಸ್ನಾನ ಮಾಡಿ ಅರಿಸಿನ, ಕುಂಕಮ, ರವಿಕೆಕಣ, ಬಳೆ, ಅಕ್ಕಿ, ಬೆಲ್ಲ, ಹೂಗಳಿಂದ ಮಡಿಲು ತುಂಬಿಸಿಕೊಂಡು ಮೇಲುಕೋಟೆ ಸುತ್ತಲೂ ಇರುವ ಅಷ್ಟತೀರ್ಥಗಳಿಗೆ ಸ್ವಾಮಿಯ ಪಾದುಕೆಯ ಉತ್ಸವದೊಂದಿಗೆ ಬರಿಗಾಲಿನಲ್ಲಿ ತೆರಳಿ ಕಲ್ಯಾಣಿಗಳಲ್ಲಿ ತೀರ್ಥಸ್ನಾನ ಮಾಡುತ್ತಾರೆ. ಸಂಜೆ ತೊಟ್ಟಿಲಮಡುವಿನಲ್ಲಿ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದ ಸುತ್ತಲೂ ಇರುವ ಬೆಟ್ಟಗುಡ್ಡ ದಾರಿಯಲ್ಲಿ ಸಾಗಿ ಬೆಟ್ಟದ ಒಡೆಯ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಹರಕೆ ಪೂರ್ಣಗೊಳಿಸುತ್ತಾರೆ.

ಅಂತರರಾಜ್ಯ ಭಕ್ತರ ಸಂಖ್ಯೆ ಹೆಚ್ಚಳ: ಕೆಲ ವರ್ಷಗಳಿಂದ ಈ ಅಷ್ಟತೀರ್ಥೊತ್ಸವಕ್ಕೆ ಆಂಧ್ರ, ತಮಿಳುನಾಡು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಹರಕೆ ಹೊರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಕಾರಣ ಈ ಅಷ್ಟತೀರ್ಥೊತ್ಸವದಲ್ಲಿ ಪಾಲ್ಗೊಂಡ ಬಹುತೇಕ ಭಕ್ತರಿಗೆ ಒಂದೇ ವರ್ಷದಲ್ಲಿ ಸಂತಾನ ಭಾಗ್ಯ ಆಗಿದೆ. ವಿವಾಹ ಅಪೇಕ್ಷಿಸುವವರಿಗೆ ಮದುವೆ ಆಗಿರುವ ಕಾರಣ ಈ ಉತ್ಸವದ ಮೇಲೆ ನಂಬಿಕೆ ಹೆಚ್ಚಾಗಿ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಗ್ರಾ.ಪಂನಿಂದ ಸ್ವಚ್ಛತೆ: ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮ ಪಂಚಾಯಿತಿಯಿಂದ ಅಧಿಕಾರಿಗಳು ಜನಪ್ರತಿನಿಧಿಗಳು ಜಾತ್ರೆ ನಡೆಯುವ ಸ್ಥಳ ಹಾಗೂ ದಾರಿಯಲ್ಲಿ ಬೆಳೆದಿದ್ದ ಗಿಡಗಳನ್ನು ಸ್ವಚ್ಛಗೊಳಿಸಿ, ಬೀದಿದೀಪದ ವ್ಯವಸ್ಥೆ ಮಾಡಿದ್ದಾರೆ.

ಈ ವೇಳೆ ಗ್ರಾ.ಪಂ ಅಧ್ಯಕ್ಷೆ ಮಣಿಮುರುಗನ್, ಉಪಾಧ್ಯಕ್ಷ ಜಿ.ಕೆ. ಕುಮಾರ್, ಸದಸ್ಯ ಜಯರಾಮೇಗೌಡ, ಪಿಡಿಒ ರಾಜೇಶ್ ಹಾಜರಿದ್ದರು.

ವಿಸ್ಮಯತಾಣ ಮೇಲುಕೋಟೆ

ಮೇಲುಕೋಟೆ ವಿಸ್ಮಯ ತಾಣವಾಗಿದೆ. ಇಲ್ಲಿ ನಡೆಯುವ ಪ್ರತಿ ಉತ್ಸವಕ್ಕೂ ಪ್ರಾಮುಖ್ಯತೆ ಇದೆ. ಗಿರಿಶಿಖರ ಮಧ್ಯೆ ನೆಲೆನಿಂತಿರುವ ತಾಯಿಗೆ ಪ್ರತಿವರ್ಷ ಅಕ್ಕಪಕ್ಕದ ಗ್ರಾಮಸ್ಥರು ದೇವಿಯ ಪೂಜೆ ಸಲ್ಲಿಸಿ ದರ್ಶನ ಪಡೆಯುತ್ತಾರೆ. ಟಿ.ಪಿ. ಪ್ರಮೋದ್ ಎಂಜಿನಿಯರ್ ಹೊಸಹಳ್ಳಿ ಜಾತ್ರೆಯಲ್ಲಿ ಪಾಲ್ಗೊಂಡರೆ ಇಷ್ಟಾರ್ಥ ಸಿದ್ಧಿ ಮೊದಲನೇ ವೈಕುಂಠ ಎಂದೇ ಪ್ರಸಿದ್ಧಿ ಪಡೆದ ಇಲ್ಲಿ ನಡೆಯುವ ತೊಟ್ಟಿಲುಮಡು ಜಾತ್ರೆ ಹಾಗೂ ಅಷ್ಟತೀರ್ಥೋತ್ಸವದಲ್ಲಿ ಪಾಲ್ಗೊಂಡರೆ ಇಷ್ಟಾರ್ಥ ಸಿದ್ಧಿಸುವುದು ಎಂಬುದು ಭಕ್ತರ ನಂಬಿಕೆ. ಅದಕ್ಕಾಗಿಯೇ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ ಅವ್ವ ಗಂಗಾಧರ್ ಮಾಜಿ ಅಧ್ಯಕ್ಷ ಮೇಲುಕೋಟೆ ಗ್ರಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.