ಮೇಲುಕೋಟೆ: ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪತ್ನಿ ಶಿಲ್ಪ ದರ್ಶನ್ ಪುಟ್ಟಣ್ಣಯ್ಯರವರು ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ಅಭಿಮಾನಿಗಳು ಮೇಲುಕೋಟೆ ಬೆಟ್ಟದ ಒಡೆಯ ಶ್ರೀ ಯೋಗಾನರಸಿಂಹ ಸ್ವಾಮಿ ಹಾಗೂ ಶ್ರೀ ಚೆಲುವ ನಾರಾಯಣ ಸ್ವಾಮಿ ದೇವರಿಗೆ ಅಭಿಷೇಕ ಹಾಗೂ ಪೂಜಾ ಕೈಂಕರ್ಯ ನೆರವೇರಿಸಿದರು.

ಇಲ್ಲಿನ ಯೋಗಾನರಸಿಂಹ ಸ್ವಾಮಿ ಬೆಟ್ಟದಲ್ಲಿ ಅಭಿಮಾನಿಗಳು 365 ಮೆಟ್ಟಿಲಿಗೆ ಮೆಟ್ಟಿಲುಕಾಯಿ ಪೂಜೆ ನೆರವೇರಿಸಿ ದೇವರಿಗೆ ಪಂಚದ್ರವ್ಯಗಳಿAದ ಅಭಿಷೇಕ ನೆರವೇರಿಸಿದರು. ನಂತರ ಶ್ರೀ ಚೆಲುವ ನಾರಾಯಣ ಸ್ವಾಮಿ ದೇವಾಲಯದಲ್ಲೂ ಅಭಿಷೇಕದೊಂದಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು.

ಅಭಿಮಾನಿಗಳು ಆಯೋಜಿಸಿದ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ ದೇವರ ದರ್ಶನದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕ್ಷೇತ್ರದ ಜನ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಈಗಾಗಲೇ ದುದ್ದ, ಪಾಂಡವಪುರ ಸೇರಿದಂತೆ ಹಲವೆಡೆ ಪತ್ನಿ ಶಿಲ್ಪಾ ಗುಣಮುಖರಾಗಲೆಂದು ಹೋಮ ಹವನ , ಪೂಜೆ ಕೈಂಕರ್ಯಗಳನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಅಪಾರ ಪ್ರೀತಿ ಕಾಳಜಿ ಇರುವ ರೈತ ಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಖಂಡಿರಿಗೆ ನಾವು ಚಿರಋಣಿಯಾಗಿರುತ್ತೇವೆ. ನನ್ನಗೆ ನನ್ನ ಕ್ಷೇತ್ರದ ಜನರ ಪ್ರೀತಿ ವಿಶ್ವಾಸವೇ ಹೆಚ್ಚಿನ ಶಕ್ತಿಯಾಗಿದೆ. ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಈ ವೇಳೆ ಸುನೀತಾ ಪುಟ್ಟಣ್ಣಯ್ಯ, ಮನ್ ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ರೈತಸಂಘ ಮುಖಂಡರಾದ ಪರಮೇಶ್ ಗೌಡ, ಯೋಗಾನರಸಿಂಹ್ಮೇಗೌಡ, ದಿಲೀಪ್, ಯೋಗಿ ಪಾಲ್ಗೊಂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.