ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಸೋಮವಾರ ಮತ್ತಷ್ಟು ಸ್ಫೋಟಕಗಳು ಕುರಿಗಾಹಿಗಳ ಕಣ್ಣಿಗೆ ಬಿದ್ದಿದೆ.

ಇದನ್ನೂ ಓದಿ:ಪಾಂಡವಪುರದ ಬೇಬಿಬೆಟ್ಟವೊಂದರಲ್ಲೇ 500 ಅಕ್ರಮ ಕ್ರಷರ್

ಬನ್ನಂಗಾಡಿ ಗ್ರಾಮದ ವ್ಯಾಪ್ತಿಯ ಸರ್ವೇ ನಂ.24ರ ಗೋಮಾಳದಲ್ಲಿ 92 ಜಿಲೆಟಿನ್ ಟ್ಯೂಬ್ಗಳು, ಹಾಗೂ 50 ಮೀಟರ್ ಉದ್ದದ ಮೆಗ್ಗಾರ್ ಬ್ಲಾಸ್ಟ್ಗೆ ಬಳಸುವ ವಾಹಕ (ತಂತಿ) ಕುರಿಗಾಹಿಗಳ ಕಣ್ಣಿಗೆ ಬಿದ್ದಿದೆ. ತಕ್ಷಣ ಕಾರ್ಯೋನ್ಮುಖರಾದ ಕೆಆರ್ಎಸ್ ಪೊಲೀಸರು ಸ್ಥಳಕ್ಕೆ ತೆರಳಿ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಬಿಡಿಡಿಎಸ್ ತಂಡ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತೆರಳಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮೈಸೂರು, ಕೆಆರ್ಎಸ್ ಜಲಾಶಯದ ಸಮೀಪ ಭಾರಿ ಶಬ್ದಕ್ಕೆ ಕಲ್ಲುಗಣಿಗಾರಿಕೆಯೇ ಕಾರಣ

ಸ್ಫೋಟಕ ವಸ್ತುಗಳ ಪತ್ತೆಗಾಗಿ ಕಳೆದ ಮೂರು ದಿನಗಳ ಕಾಲ ಸ್ಫೋಟಕ ಮತ್ತು ನಿಷ್ಕ್ರೀಯ ದಳದ ಅಧಿಕಾರಿಗಳ ತಂಡವು ಶೋಧ ನಡೆಸಿ, ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಿ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದ್ದರು. ಬೇಬಿಬೆಟ್ಟ ಗಣಿಗಾರಿಕೆ ಪ್ರದೇಶದ ಚಿನಕುರಳಿ, ಹೊನಗಾನಹಳ್ಳಿ, ರಾಗಿಮುದ್ದನಹಳ್ಳಿ, ಶಿಂಡಭೋಗನಹಳ್ಳಿ ವ್ಯಾಪ್ತಿಯ ಕ್ವಾರಿ ಮತ್ತು ಕ್ರಷರ್ಗಳಲ್ಲಿ ನಿರಂತರ ಶೋಧ ಕಾರ್ಯ ನಡೆಸಿದ್ದರು. ಆದರೆ, ಶೋಧ ಕಾರ್ಯದಲ್ಲಿ ಮೊದಲನೇ ದಿನ ಹಲವು ಸ್ಫೋಟಕಗಳು ಪತ್ತೆಯಾಗಿದ್ದವು. ಎರಡನೇ ದಿನ ಮತ್ತು ಮೂರನೇ ದಿನ ಸ್ಫೋಟಕಗಳು ನಿರೀಕ್ಷಿತ ಮಟ್ಟದಲ್ಲಿ ಪತ್ತೆಯಾಗಿರಲಿಲ್ಲ. ಹೀಗಾಗಿ ಬೆಂಗಳೂರು, ಮೈಸೂರು, ಹಾಸನ ಮತ್ತು ಮಂಡ್ಯದಿಂದ ಬಂದಿದ್ದ ಸ್ಫೋಟಕ ಪತ್ತೆ ದಳ ವಾಪಾಸಾಗಿತ್ತು.

ಇದನ್ನೂ ಓದಿ:ಒಳನೋಟ| ಅಕ್ರಮ ಗಣಿಗಾರಿಕೆಗೂ ರಾಜಕಾರಣಕ್ಕೆ ನಿಕಟ ನಂಟು

ಅವರು ಶೋಧ ನಡೆಸದೆ ಹಲವು ಸ್ಥಳಗಳಲ್ಲಿ ಸೋಮವಾರ ಸ್ಫೋಟಕಗಳು ಕುರಿಗಾಹಿಗಳ ಕಣ್ಣಿಗೆ ಬಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ್ದವು. ಸ್ಫೋಟಕ ಪತ್ತೆ ದಳದ ಕಾರ್ಯವೈಖರಿಯ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಒಳನೋಟ| ಲೋಕಾಯುಕ್ತ ವರದಿಗೆ ದಶಕ: ಕ್ರಮ ಇನ್ನೂ ಬಾಕಿ...

ನೆಪ ಮಾತ್ರಕ್ಕೆ ಶೋಧ ನಡೆಸುವು ದನ್ನು ಬಿಟ್ಟು ಪ್ರಾಮಾಣಿಕವಾಗಿ ಶೋಧ ಕಾರ್ಯ ನಡೆಸಿದರೆ ಸಾವಿರಗಟ್ಟಳೆ ಸ್ಫೋಟಕಗಳು ಪತ್ತೆಯಾಗುತ್ತವೆ. ಮತ್ತಷ್ಟು ಶೋಧ ನಡೆಯಬೇಕಿದೆ ಎಂದು ಗಣಿಗಾರಿಕೆ ಪ್ರದೇಶದ ಸುತ್ತಲಿನ ಗ್ರಾಮಗಳು ಜನರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಒಳನೋಟ| ‘ಸಕ್ರಮ’ದ ಹೆಸರಲ್ಲಿ ‘ಅಕ್ರಮ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.