ಕೆ.ಆರ್.ಪೇಟೆ: ಪಟ್ಟಣದ ಬಸ್ ನಿಲ್ದಾಣದಿಂದ ಬೆಂಗಳೂರಿನ ಶ್ರೀನಗರ ಮಾರ್ಗವಾಗಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಮತ್ತು ನಿರ್ವಾಹಕರ ಕನ್ನಡ ಪ್ರೇಮದಿಂದ ಕನ್ನಡ ಬಾವುಟ, ಕವಿಗಳ ಭಾವಚಿತ್ರಗಳಿಂದ ಸಿಂಗಾರಗೊಂಡು ಪ್ರಯಾಣಿಕರು ಮತ್ತು ಕನ್ನಡ ಪ್ರೇಮಿಗಳ ಪ್ರೀತಿಗೆ ಪಾತ್ರವಾಗಿದೆ.

ಪ್ರತಿನಿತ್ಯ ನಾಗಮಂಗಲ ಮಾರ್ಗವಾಗಿ ಸಂಚರಿಸುವ ನಾಗಮಂಗಲ ಡಿಪೋ ಬಸ್ಸಿನ ಚಾಲಕ ವೀರೇಶ್ ಹಾಗೂ ನಿರ್ವಾಹಕ ಸಿದ್ದರಾಜು ಕನ್ನಡ ಪ್ರೇಮ ಮೆರೆಯುತ್ತಿದ್ದಾರೆ.

‘ನವೆಂಬರ್ ತಿಂಗಳು ಕನ್ನಡಿಗರ ಅಭಿಮಾನದ ತಿಂಗಳು. ಹಾಗಾಗಿ ಪ್ರಯಾಣಿಕರಿಗೆ ಕನ್ನಡ ನಾಡು –ನುಡಿ, ನೆಲ- ಜಲದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬಸ್ನಲ್ಲಿ ಕನ್ನಡ ಗೀತೆಗಳನ್ನು ಕೇಳಿಸುತಿದ್ದೇವೆ. ಕನ್ನಡದ ಕವಿಗಳು, ಸಾಧಕರು ಮತ್ತು ಮಹನೀಯರ ಪೋಟೋಗಳನ್ನು ಅಂಟಿಸಿ ಅವರ ಸಾಧನೆ ತಿಳಿಸುತ್ತಿದ್ದೇವೆ’ ಎಂದು ವೀರೇಶ್ ಹಾಗೂ ಸಿದ್ದರಾಜು ತಿಳಿಸಿದರು.

ಚಾಲಕ – ನಿರ್ವಾಹಕರ ಕನ್ನಡ ಪ್ರೇಮಕ್ಕೆ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.