ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Budget 2023: ಮಂಡ್ಯ ಜಿಲ್ಲೆಗೆ ಬೇಕು ಕೃಷಿಯಾಧಾರಿತ ಕೈಗಾರಿಕೆ

ಪೂರಕ ಬಜೆಟ್‌ ನಾಳೆ; ಸಕ್ಕರೆ ಜಿಲ್ಲೆಯ ಬೇಡಿಕೆ ಈಡೇರಿಸುವರೇ ಮುಖ್ಯಮಂತ್ರಿ ಸಿದ್ದರಾಮಯ್ಯ?
Published : 6 ಜುಲೈ 2023, 6:57 IST
Last Updated : 6 ಜುಲೈ 2023, 6:57 IST
ಫಾಲೋ ಮಾಡಿ
Comments
- ಎಥೆನಾಲ್‌ ಘಟಕ ಸ್ಥಾಪನೆ ಯಾವಾಗ?
ಇದೇ ವರ್ಷ ಫೆ.17ರಂದು ಬಜೆಟ್‌ ಮಂಡಿಸಿದ್ದ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಷುಗರ್‌ ಕಾರ್ಖಾನೆಯಲ್ಲಿ ಎಥೆನಾಲ್‌ ಘಟಕ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದು ಘೋಷಣೆಯಾಗಿಯೇ ಉಳಿದಿದ್ದು ಇನ್ನೂ ಕಾರ್ಯಗತಗೊಂಡಿಲ್ಲ. ಈಗಿನ ಸರ್ಕಾರ ಕಾರ್ಖಾನೆ ಪುನಶ್ಚೇತನಕ್ಕೆ ₹ 50 ಕೋಟಿ ಅನುದಾನ ನೀಡಿದ್ದು ಕಾರ್ಖಾನೆ ಆರಂಭವಾಗುತ್ತಿದೆ. ಕಾರ್ಖಾನೆಯನ್ನು ಲಾಭದತ್ತ ಕೊಂಡೊಯ್ಯುವ ರೈತರಿಗೆ ಶಕ್ತಿ ತುಂಬುವ ಎಥೆನಾಲ್‌ ಘಟಕ ಸ್ಥಾಪನೆಯಾಗಬೇಕು ಎಂಬ ಒತ್ತಾಯ ಮೊದಲಿನಿಂದಲೂ ಇದೆ. ಈಗಲಾದರೂ ಈ ಬೇಡಿಕೆ ಈಡೇರುವುದೇ ಎಂಬ ನಿರೀಕ್ಷೆ ಕಬ್ಬು ಬೆಳೆಗಾರರಲ್ಲಿದೆ.
ಮಂಡ್ಯ ನಗರಕ್ಕೆ ಏನು ಸಿಗುವುದು?
ಬೆಂಗಳೂರು– ಮೈಸೂರು ನಡುವೆ ದೊಡ್ಡ ಹಳ್ಳಿಯಂತಿರುವ ಮಂಡ್ಯ ನಗರ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಗರದ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹ 50 ಕೋಟಿ ಘೋಷಣೆ ಮಾಡಿದ್ದರು. ಸರ್ಕಾರ ಬದಲಾದ ನಂತರ ಆ ಹಣ ವಾಪಸ್‌ ಹೋಯಿತು. ಈಗಿನ ಶಾಸಕ ಗಣಿಗ ರವಿಕುಮಾರ್‌ ನಗರದ ಅಭಿವೃದ್ಧಿಗೆ ₹ 250 ಕೋಟಿ ಬಿಡುಗಡೆ ಮಾಡಲು ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಶಾಸಕರ ಮನವಿಯನ್ನು ಮಾನ್ಯ ಮಾಡಿ ನಗರದ ಅಭಿವೃದ್ಧಿಗೆ ಏನು ಕೊಡುಗೆ ಕೊಡಲಿದ್ದಾರೆ ಎಂಬ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT