ಮದ್ದೂರು: ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ನಮ್ಮ ನಮ್ಮ ನೆಲ, ಜಲ, ಭಾಷೆಯನ್ನು ಗೌರವಿಸಬೇಕು ಎಂದು ಶಾಸಕ ಕೆ. ಎಂ. ಉದಯ್ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು. ನಾವು ಕನ್ನಡ ಭಾಷೆಯನ್ನು ಪ್ರೀತಿಸಬೇಕು, ಕನ್ನಡ ಕಲಿಯಲು ಮತ್ತು ಕಲಿಸಲು ಅತ್ಯಂತ ಸರಳ ಭಾಷೆ ಎಂದರು. ತಹಸೀಲ್ದಾರ್ ಡಾ.ಸ್ಮಿತಾರಾಮು ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ಟಿ.ತಿಮ್ಮಯ್ಯ (ಸಾಮಾಜಿಕ ಸೇವಾ ಕ್ಷೇತ್ರ), ಟಿ.ನಂಜುಂಡೇಗೌಡ (ರಂಗಭೂಮಿ ಕ್ಷೇತ್ರ), ಬಿ.ಆರ್.ಶಂಭೂಗೌಡ (ಉದ್ಯಮಿ), ಟಿ.ಎಸ್.ರಾಜು (ನೈಸರ್ಗಿಕ ಕೃಷಿ), ಎಂ.ಸಿ.ಲಿಂಗರಾಜು, ಮಹಾಲಿಂಗ (ಕನ್ನಡಪರ ಹೋರಾಟ), ಎನ್.ಶಿವಕುಮಾರಿ, ವಾಸುದೇವ, ವಿ.ಜೆ.ಆದೇಶ್ (ಸಮಾಜಸೇವೆ), ಎಚ್.ಬಿ.ವಿಷ್ಣುಪ್ರಸಾದ್ (ಚಿತ್ರಕಲೆ), ಭೀಮನಕೆರೆ ಜಯಣ್ಣ (ಪೂಜಾ ಕುಣಿತ) ಹಾಗೂ ಡಾ.ಸೌಭಾಗ್ಯ (ಶಿಕ್ಷಣ) ಅವರನ್ನು ಸನ್ಮಾನಿಸಲಾಯಿತು.

ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪಟ್ಟಣದ ಉಗ್ರ ನರಸಿಂಹಸ್ವಾಮಿ ದೇಗುಲದ ಆವರಣದಿಂದ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿ, ತಾಲ್ಲೂಕು ಕ್ರೀಡಾಂಗಣಕ್ಕೆ ಆಗಮಿಸಿದರು.

ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿದ್ದರಾಜು, ಸದಸ್ಯರಾದ ಸರ್ವಮಂಗಳ, ವನಿತಾ, ಬಸವರಾಜು, ಮುಖ್ಯಾಧಿಕಾರಿ ಎಂ.ಮೀನಾಕ್ಷಿ, ಕಸಾಪ ತಾಲೂಕು ಅಧ್ಯಕ್ಷ ಸುನಿಲ್,ತಾಪಂ ಇಒ ಎಚ್.ಆರ್.ರಾಮಲಿಂಗಯ್ಯ, ಬಿಇಒ ಸಿ.ಎಚ್.ಕಾಳೀರಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.