ಮಂಡ್ಯ: ಆಧುನಿಕ ಮಂಡ್ಯ ಶಿಲ್ಪಿ ಕೆ.ವಿ.ಶಂಕರಗೌಡ ಅವರ ಮೊಮ್ಮಗ, ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅವರಿಗೆ ಈ ಬಾರಿಯೂ ನಿರಾಸೆಯಾಗಿದೆ. ಶಂಕರಗೌಡರ ಕುಟುಂಬಕ್ಕೆ ರಾಜಕೀಯವಾಗಿ ಪುನರ್ಜನ್ಮ ದೊರೆಯಬೇಕು ಎಂಬ ಜಿಲ್ಲೆಯ ಜನರ ನೀರಿಕ್ಷೆಗೆ ಜೆಡಿಎಸ್ ವರಿಷ್ಠರು ಮತ್ತೆ ತಣ್ಣೀರು ಸುರಿದಿದ್ದಾರೆ.

2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಎಚ್.ಡಿ.ಕುಮಾರಸ್ವಾಮಿ ಅವರು ‘ಶಂಕರಗೌಡರ ಕುಟುಂಬದ ಕುಡಿಯನ್ನು ರಾಜಕೀಯವಾಗಿ ಬೆಳೆಸಲಾಗುವುದು’ ಎಂದು ಮಾತು ಕೊಟ್ಟಿದ್ದರು. ಈ ಬಾರಿ ಶಾಸಕ ಎಂ.ಶ್ರೀನಿವಾಸ್ ಅವರ ಹೆಸರು ಬದಲಾವಣೆ ಮಾಡಿ ವಿಜಯ್ ಆನಂದ್ ಅವರನ್ನೇ ಅಂತಿಮಗೊಳಿಸಲಾಗಿದೆ ಎಂಬ ಸುದ್ದಿಗಳು ಜಿಲ್ಲೆಯಾದ್ಯಂತ ಹರಿದಾಡಿದ್ದವು.

ಕುಮಾರಸ್ವಾಮಿ ಮಾತು ಕೊಟ್ಟಂತೆ ಕೆವಿಎಸ್ ಕುಟುಂಬದ ಕುಡಿಗೆ ರಾಜಕೀಯವಾಗಿ ಹೊಸ ಜನ್ಮ ದೊರೆಯಲಿದೆ ಎಂಬ ನಿರೀಕ್ಷೆ ಜನರಲ್ಲಿತ್ತು. ಏ.19 ಅಥವಾ ಏ.20ರಂದು ವಿಜಯ್ ಆನಂದ್ ನಾಮಪತ್ರ ಸಲ್ಲಿಸುತ್ತಾರೆ ಎಂದೇ ಹೇಳಲಾಗುತ್ತಿತ್ತು.

ಅದಕ್ಕಾಗಿ ವಿಜಯ್ ಆನಂದ್ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ ಅಂತಿಮವಾಗಿ ಮತ್ತೊಬ್ಬ ಪ್ರಬಲ ಟಿಕೆಟ್ ಆಕಾಂಕ್ಷಿ, ಮಂಡ್ಯ ಹಾಲು ಒಕ್ಕೂಟದ (ಮನ್ಮುಲ್) ಅಧ್ಯಕ್ಷ ಬಿ.ಆರ್.ರಾಮಚಂದ್ರ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

‘ಈ ಬಾರಿ ವಿಜಯ್ ಆನಂದ್ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಪಕ್ಷಕ್ಕೂ ಒಳ್ಳೆಯ ಹೆಸರು ಬರುತ್ತಿತ್ತು. ಅವರ ಹೆಸರು ಘೋಷಣೆಯಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದೆವು, ಆದರೆ ನಮ್ಮ ನಿರೀಕ್ಷೆ ಸುಳ್ಳಾಗಿದೆ. ಹಣ ಇದ್ದವರಿಗೆ ಮಾತ್ರ ಟಿಕೆಟ್ ನೀಡುವ ಜೆಡಿಎಸ್ ಸಂಸ್ಕೃತಿ ಮುಂದುವರಿದಿದೆ’ ಎಂದು ವಿಜಯ್ ಆನಂದ್ ಬೆಂಬಲಿಗರೊಬ್ಬರು ತಿಳಿಸಿದರು.

ಗೊಂದಲ ನಿವಾರಣೆ: ಎಂ.ಶ್ರೀನಿವಾಸ್ ಬದಲಿಗೆ ಎಚ್.ಡಿ.ಕುಮಾರಸ್ವಾಮಿ ಅವರೇ ಚನ್ನಪಟ್ಟಣ ಜೊತೆಗೆ ಮಂಡ್ಯದಿಂದಲೂ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಎಂ.ಶ್ರೀನಿವಾಸ್ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಮಂಡ್ಯ ಕ್ಷೇತ್ರದಿಂದಲೂ ಸ್ಪರ್ಧಿಸುವಂತೆ ಆಹ್ವಾನಿಸಿದ್ದರು. ಹೀಗಾಗಿ ಅಂತಿಮ ಕ್ಷಣದಲ್ಲಿ ಕುಮಾರಸ್ವಾಮಿಯವರೇ ನಾಮಪತ್ರ ಸಲ್ಲಿಸುತ್ತಾರೆ ಎಂದೇ ಹೇಳಲಾಗುತ್ತಿತ್ತು.

ಈಗ ಗೊಂದಲ ನಿವಾರಣೆಯಾಗಿದ್ದು ಬಿ.ಆರ್.ರಾಮಚಂದ್ರ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೇ ಬುಧವಾರ ಬಿ.ಫಾರಂ ವಿತರಣೆ ಮಾಡಲಿದ್ದಾರೆ. ಗುರುವಾರ ಎಚ್.ಡಿ.ಕುಮಾರಸ್ವಾಮಿ ಮಂಡ್ಯಕ್ಕೆ ಬರಲಿದ್ದು ಅವರ ಸಮ್ಮುಖದಲ್ಲಿ ರಾಮಚಂದ್ರ ನಾಮಪತ್ರ ಸಲ್ಲಿಸಲಿದ್ದಾರೆ.

ಎಂ.ಶ್ರೀನಿವಾಸ್ ಸೆಳೆಯಲು ಯತ್ನ: ಜೆಡಿಎಸ್ ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆಯಾಗಿ ಈಗ ಬಿ.ಫಾರಂ ವಂಚಿತರಾಗಿರುವ ಶಾಸಕ ಎಂ.ಶ್ರೀನಿವಾಸ್ ಅವರನ್ನು ಸೆಳೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಯತ್ನಿಸುತ್ತಿದ್ದಾರೆ. ‘ಬೆಂಬಲಿಗರ ಸಭೆ ನಡೆಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಮಾಜಿ ಸಚಿವ ಎಸ್.ಡಿ.ಜಯರಾಂ ಪುತ್ರ ಈಗ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಎಂ.ಶ್ರೀನಿವಾಸ್ ಹಾಗೂ ಎಸ್.ಡಿ.ಜಯರಾಂ ಇಬ್ಬರು ಸ್ನೇಹಿತರಾಗಿದ್ದವರು. ಆ ಸ್ನೇಹದ ಪ್ರತೀಕವಾಗಿ ಬಿಜೆಪಿಗೆ ಬೆಂಬಲ ನೀಡುವಂತೆ ಕೋರಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ವಿಜಯ್ ಆನಂದ್ ಪಕ್ಷೇತರರಾಗಿ ಸ್ಪರ್ಧೆ?
ಅಂತಿಮ ಕ್ಷಣದಲ್ಲಿ ಟಿಕೆಟ್ ವಂಚಿತರಾಗಿದ್ದಕ್ಕೆ ವಿಜಯ್ ಆನಂದ್ ಬೆಂಬಲಿಗರು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ವರಿಷ್ಠರ ವಿರುದ್ಧ ಘೋಷಣೆ ಕೂಗಿದರು. ಶಂಕರಗೌಡ ಕುಟುಂಬದ ಸದಸ್ಯರು, ಅವರ ಹಿತೈಷಿಗಳು ವಿಜಯ್ ಆನಂದ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ‘ಏನಾದರೂ ಸರಿ, ಈ ಚುನಾವಣೆಯಲ್ಲಿ ವಿಜಯ್ ಆನಂದ್ ಕಣದಲ್ಲಿ ಇರಬೇಕು, ಪಕ್ಷೇತರವಾಗಿ ಸ್ಪರ್ಧೆ ಮಾಡಬೇಕು’ ಎಂಬ ಒತ್ತಾಯ ಕೇಳಿ ಬಂತು.

‘ನಮ್ಮ ತಾತ ಶಂಕರಗೌಡರ ಹಿತೈಷಿಗಳು ಪಕ್ಷೇತರವಾಗಿ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಎಲ್ಲರ ಸಲಹೆ ಸೂಚನೆ ಪಡೆದು ಸ್ಪರ್ಧೆಯಲ್ಲಿ ಇರಬೇಕೋ, ಬೇಡವೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕೆ.ಎಸ್.ವಿಜಯ್ ಆನಂದ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.