ಮಂಡ್ಯ: ಭಾರತ ಸರ್ಕಾರದ ಅನುದಾನಿತ ಸಂಸ್ಥೆಗಳ ವಿಭಾಗದ ಅಟಲ್ ರ‍್ಯಾಂಕಿಂಗ್ ಆಫ್ ಇನ್‌ಸ್ಟಿಟ್ಯೂಟ್ ಆನ್ ಇನೊವೇಶನ್ ಅಚಿವ್‌ಮೆಂಟ್ (ಎಆರ್‌ಐಐಎ) ಪಟ್ಟಿಯಲ್ಲಿ ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಸಂಸ್ಥೆ 2ನೇ ರ‍್ಯಾಂಕ್ ಪಡೆದಿದೆ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಭಾರತದಾದ್ಯಂತ ಇರುವ 10 ಸಾವಿರ ಕಾಲೇಜುಗಳ ಪೈಕಿ 200 ಕಾಲೇಜುಗಳನ್ನು ರ‍್ಯಾಂಕಿಂಗ್ ಪಟ್ಟಿಗೆ ಆಯ್ಕೆ ಮಾಡಿದ್ದು, ಮಹಾರಾಷ್ಟ್ರದ ಎಂಜಿನಿಯರಿಂಗ್ ಕಾಲೇಜು ಪ್ರಥಮ ಪ್ರಥಮ ರ್‍ಯಾಂಕಿಂಗ್, ನಮ್ಮ ಕಾಲೇಜು ದ್ವಿತೀಯ ರ‍್ಯಾಂಕ್ ಪಡೆದಿರುವುದು ಸಂತಸ ತಂದಿದೆ. ಇಡೀ ರಾಜ್ಯದಲ್ಲಿ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಉನ್ನತ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ’ ಎಂದರು.

‘2018 ರಿಂದ ಎಂಎಚ್‍ಆರ್‌ಡಿ, ಸರ್ಕಾರ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪ್ರಾಥಮಿಕ ನಾವಿನ್ಯತೆಗೆ ಸಂಬಂಧಿತ ಸೂಚಕಗಳ ಮೇಲೆ ವ್ಯವಸ್ಥಿತವಾಗಿ ಶ್ರೇಣೀಕರಿಸಲು ಭಾರತದ ಅಟಲ್ ರ‍್ಯಾಂಕಿರ್ ಆಫ್ ಇನ್‌ಸ್ಟಿಟ್ಯೂಟ್ ಆನ್ ಇನೋವೇಶನ್ ಅಚಿವ್‌ಮೆಂಟ್ ಪ್ರಾರಂಭಿಸಲಾಗಿದೆ. ದೇಶದಲ್ಲೇ ಸಂಸ್ಥೆಗೆ ಎರಡನೇ ಸ್ಥಾನ ಬಂದಿರುವುದು ಸಂತಸ ತಂದಿದೆ. ಉತ್ತಮ ಗುಣಮಟ್ಟದ ಸಂಶೋಧನೆ, ನಾವಿನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಭಾರತೀಯ ಸಂಸ್ಥೆಗಳಿಗೆ ಉತ್ತಮ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸಲು ಪ್ರೋತ್ಸಾಹಿಸುತ್ತದ’ ಎಂದರು.

‘ಇದಲ್ಲದೆ ಭವಿಷ್ಯದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ಪ್ರಶಸ್ತಿಯು ಸಹಕಾರಿಯಾಗಲಿದೆ. ಈಗಾಗಲೇ ಜೈವಿಕ ಇಂಧನ ತಯಾರಿಕಾ ಘಟಕವನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಹಾಗೂ ನೀರು ಶುದ್ಧೀಕರಣ ಯೋಜನೆಯನ್ನು ರೂಪಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು’ ಎಂದು ತಿಳಿಸಿದರು.

ಕಾಲೇಜು ಪ್ರಾಂಶುಪಾಲ ಡಾ.ಎಚ್.ವಿ. ರವೀಂದ್ರ, ಪ್ರಾಧ್ಯಾಪಕರಾದ ಡಾ.ಬಿ.ಎಸ್. ಶಿವಕುಮಾರ್, ಡಾ. ಎಸ್. ವಿನಯ್, ಡಾ. ಕೆ.ಎನ್. ಪವನ್, ಡಾ. ದಿನೇಶ್‍ಪ್ರಭು, ಡಾ. ನರಸಿಂಹಾಚಾರಿ, ಡಾ. ಮುರಳಿಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.