ಕೆ.ಆರ್.ಪೇಟೆ: ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು, ರೈತರಲ್ಲಿ ಹರ್ಷ ಮೂಡಿಸಿರುವುದರ ಜೊತೆಗೆ ನದಿ ಪಾತ್ರದಲ್ಲಿ ಜೀವಕಳೆ ಸೃಷ್ಟಿಸಿದೆ.

ಕಳೆದ ಎರಡು ವರ್ಷಗಳಿಂದ ಭಾರೀ ಪ್ರಮಾಣದ ನೀರು ಹರಿಯದೆ ಅಂತರ್ಜಲ ಕುಸಿದಿತ್ತು. ಈ ಬಾರಿ ಹೇಮಾವತಿ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ನದಿಗೆ ಹೆಚ್ಚುವರಿ ನೀರು ಬಿಟ್ಟಿರುವುದರಿಂದ ತಾಲ್ಲೂಕಿನ ಹೇಮಗಿರಿ ಬಳಿ ಹೇಮಾವತಿ ನದಿಯು ಭೋರ್ಗರೆಯುತ್ತಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದನ್ನು ಕಣ್ತುಂಬಿಕೊಳ್ಳಲು ನದಿ ಪಾತ್ರದ ಹಳ್ಳಿಗಳಲ್ಲಿ ನೂರಾರು ಜನರು ನೆರೆದಿದ್ದಾರೆ. ಕೆಲವೆಡೆ ಜನರು ಬಾಗಿನ ಅರ್ಪಿಸಿ ಪೂಜೆ ಸಲ್ಲಿಸುತಿದ್ದಾರೆ.

ಹೇಮಗಿರಿ ಸಮೀಪ ಹೇಮಾವತಿ ನದಿಯು ಪಶ್ಚಿಮಾಭಿಮುಖವಾಗಿ ಹರಿದು ನಂತರ ಮೈಸೂರು ಮಹಾರಾಜರು ಕಟ್ಟಿಸಿರುವ ಅಣೆಯಲ್ಲಿ ಚಿಮ್ಮಿ ನಂತರ ದಕ್ಷಿಣಾಭಿಮುಖವಾಗಿ ಹರಿದು ಸಂಗಾಪುರ ಬಳಿ ಇರುವ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಯನ್ನು ಸೇರುತ್ತಿದೆ.

ತಾಲ್ಲೂಕಿನ ಕಡೆ ಹೆಮ್ಮಿಗೆ ಮತ್ತು ಗೂಡೆಹೊಸಹಳ್ಳಿ ಬಳಿ ತಾಲ್ಲೂಕನ್ನು ಪ್ರವೇಶಿಸುವ ಹೇಮಾವತಿ ನದಿ ಮಾದಾಪುರದ ಬಳಿ ರಭಸವಾಗಿ ಹರಿದು, ಗೊಂದಿಹಳ್ಳಿ ಬಳಿ ಕಿರಿದಾಗಿ ಮಂದಗೆರೆ ಬಳಿ ತನ್ನ ಹರಿವನ್ನು ವಿಸ್ತರಿಸಿಕೊಂಡು ಮಂದಗಾಮಿನಿಯಂತೆ ಹರಿಯುತ್ತಿದೆ. ಗಾಣದಹಳ್ಳಿ ಸುತ್ತಿ ಇಲ್ಲಿ ಕುರಾವು ದ್ವೀಪಗಳನ್ನು ಬಳಸಿಕೊಂಡು ಹೇಮಗಿರಿ ಸಮೀಪಿಸುತ್ತದೆ.

ಹೇಮಗಿರಿ ಅಣೆಯ ಮೇಲೆ ನದಿ ಬೋರ್ಗರೆಯುತ್ತ ಚಿಮ್ಮುವುದನ್ನು ವೀಕ್ಷಿಸಲು ಜನರು ಮುಗಿಬಿದ್ದಿದ್ದು, ಪೊಲೀಸರು ಮುಂಜಾಗರೂಕತಾ ಕ್ರಮ ವಹಿಸಿದ್ದಾರೆ. ಇಲ್ಲಿ ನದಿಯ ಹರಿಯುವಿಕೆ ನೋಡುವುದೇ ಚೆಂದ. ಬಂಡಿಹೊಳೆ ಬಳಿ ಹೊಸಪಟ್ಟಣ ದ್ವೀಪ ನದಿಯಿಂದ ಸೃಷ್ಟಿಯಾಗಿದ್ದು, ಹಳೆ ಹರಿಹರಪುರದ ನಂತರ ಅಕ್ಕಿಹೆಬ್ಬಾಳು ಸೇತುವೆ ಬಳಿ ನದಿ ಗೋಚರಿಸತ್ತದೆ. ಸೇತುವೆ ಮೇಲೆ ಸಾವಿರಾರು ಮಂದಿ ನದಿ ಮೈದುಂಬಿ ಹರಿಯುತ್ತರುವದನ್ನು ಕಣ್ತುಂಬಿಕೊಳ್ಳಲು ನೆರೆದಿದ್ದು ತ್ರಿವೇಣಿಸಂಗಮ, ಭೂವರಾಹನಾಥಸ್ವಾಮಿ ದೇವಸ್ಥಾನ, ಬಸ್ತಿಗೊಮ್ಮಟ ಕ್ಷೇತ್ರಗಳಲ್ಲಿ ನದಿ ಮೈತುಂಬಿಕೊಂಡು ಕಾವೇರಿ ಮತ್ತು ಲಕ್ಷ್ಮಣತೀರ್ಥೆಯರೊಂದಿಗೆ ಸಂಗಮಿಸಿ ಕನ್ನಂಬಾಡಿಕಟ್ಟೆಯತ್ತ ಸಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.